ಆಸೀಸ್ ತಂಡದ ಆರಂಭಿಕ ಆಟಗಾರನಾಗಿ ಸಾಕಷ್ಟು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಕೊಟ್ಟಿರುವ ವಾರ್ನರ್, ಇನ್ನಷ್ಟು ಪಂದ್ಯಗಳನ್ನು ಆಸ್ಟ್ರೇಲಿಯಾ ಪರ ಆಡಲು ಉತ್ಸುಕರಾಗಿದ್ದಾರೆ.
ಸಿಡ್ನಿ(ಜೂ.18): ಜೂ.30ರೊಳಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಆಟಗಾರರ ನಡುವೆ ಉಂಟಾಗಿರುವ ವೇತನ ಬಿಕ್ಕಟ್ಟನ್ನು ಬಗೆಹರಿಸದಿದ್ದರೆ ಮುಂಬರುವ ಬಾಂಗ್ಲಾದೇಶ ಪ್ರವಾಸ ಹಾಗೂ ಆ್ಯಷಸ್ ಸರಣಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆಸ್ಟ್ರೇಲಿಯಾ ತಂಡದ ಉಪನಾಯಕ ಡೇವಿಡ್ ವಾರ್ನರ್ ಎಚ್ಚರಿಕೆ ನೀಡಿದ್ದಾರೆ.
‘ನೂತನ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಜೂನ್ 30ರ ನಂತರ ವೇತನ ನೀಡುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಆ ಪ್ರಕಾರ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ನಾವು ಜುಲೈ 1ರಿಂದ ನಿರುದ್ಯೋಗಿಗಳಾಗುತ್ತೇವೆ. ಇದೊಂದು ಇರುಸು-ಮುರುಸಾದ ಸನ್ನಿವೇಶವಾಗಿದ್ದು, ನಾವು ಆಸ್ಟ್ರೇಲಿಯಾಕ್ಕಾಗಿ ಆಡಲಿದ್ದೇವೆ. ಬಾಂಗ್ಲಾ ಪ್ರವಾಸಕ್ಕೆ ತೆರಳುತ್ತೇವೆ. ಆದರೆ, ಆ್ಯಷಸ್ ಸರಣಿ ಆಡುವುದಿಲ್ಲ’ ಎಂದಿದ್ದಾರೆ.
ಆಸೀಸ್ ತಂಡದ ಆರಂಭಿಕ ಆಟಗಾರನಾಗಿ ಸಾಕಷ್ಟು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಕೊಟ್ಟಿರುವ ವಾರ್ನರ್, ಇನ್ನಷ್ಟು ಪಂದ್ಯಗಳನ್ನು ಆಸ್ಟ್ರೇಲಿಯಾ ಪರ ಆಡಲು ಉತ್ಸುಕರಾಗಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಅವರೊಂದಿಗೆ ಒಪ್ಪಂದ ಮುಂದುವರೆಸುತ್ತೋ ಇಲ್ಲವೇ ತಂಡದಿಂದ ಕೈಬಿಡುತ್ತೊ ಕಾಲವೇ ಉತ್ತರಿಸಬೇಕಿದೆ.
