ಕರಾಚಿ[ಜೂ.18]: ಪಾಕಿಸ್ತಾನ ಕ್ರಿಕೆಟ್ ತಂಡವು 2017ರ ಚಾಂಪಿಯನ್ಸ್ ಟ್ರೋಫಿ ಗೆದ್ದು ಸರಿಯಾಗಿ ಒಂದು ವರ್ಷದ ಬಳಿಕ ಪಾಕ್ ಮಾಜಿ ನಾಯಕ ವಕಾರ್ ಯೂನಿಸ್ ಮುಂಬರುವ ವಿಶ್ವಕಪ್’ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಬಗ್ಗೆ ಮಾತನಾಡಿದ್ದಾರೆ.

ಕಳೆದ ವರ್ಷ ಇಂಗ್ಲೆಂಡ್’ನಲ್ಲಿ ನಡೆದ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಎಂದೇ ಕರೆಯಲ್ಪಡುವ ಭಾರತವನ್ನು ಪಾಕಿಸ್ತಾನ ತಂಡವು 180 ರನ್’ಗಳ ಅಂತರದಲ್ಲಿ ಮಣಿಸಿ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದಿತ್ತು. ಇದೀಗ ಪಾಕಿಸ್ತಾನದ ಬೆನ್ನಿಗೆ ಮಾಜಿ ವೇಗಿ ನಿಂತಿದ್ದಾರೆ. 'ಪಾಕಿಸ್ತಾನ ತಂಡವು ಕಳೆದ ವರ್ಷ ಇಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಲಾರ್ಡ್ಸ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ಪಾಕಿಸ್ತಾನ ಜಯ ಸಾಧಿಸಿದೆ. ಹಾಗಾಗಿ ಇಂಗ್ಲೆಂಡ್ ನೆಲದಲ್ಲಿ ಹೇಗೆ ಆಡಬೇಕು ಎನ್ನುವುದು ಪಾಕಿಸ್ತಾನಕ್ಕೆ ಚೆನ್ನಾಗಿ ಗೊತ್ತಿದೆ. ಚಾಂಪಿಯನ್ಸ್ ಟ್ರೋಫಿ ಜಯಿಸಿರುವುದರಿಂದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಹೀಗಾಗಿ ಪಾಕಿಸ್ತಾನ ಮುಂಬರುವ 2019ರ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕುಂಬ್ಳೆ 10 ವಿಕೆಟ್'ಗಳ ಸಾಧನೆ ಮಾಡಿದ್ದು ಓಕೆ; ಆದ್ರೆ ಸೆಹ್ವಾಗ್ ವಾಸೀಂ ಅಕ್ರಂಗೆ ಥ್ಯಾಂಕ್ಸ್ ಹೇಳಿದ್ದೇಕೆ..?

ವಿಶ್ವಕಪ್ ಗೆಲ್ಲುವ ಮತ್ತೊಂದು ತಂಡವೆಂದರೆ ಅದು ಇಂಗ್ಲೆಂಡ್ ತಂಡ ಎಂಬ ಅಭಿಪ್ರಾಯ ವಕಾರ್ ಅವರದ್ದು. ಕಳೆದ ಎರಡು ವಿಶ್ವಕಪ್’ಗಳನ್ನು ಆತಿಥ್ಯ ವಹಿಸಿದ್ದ ತಂಡಗಳೇ ಗೆದ್ದುಕೊಂಡಿವೆ. ಹೀಗಾಗಿ ಈ ಬಾರಿ ಇಂಗ್ಲೆಂಡ್’ಗೆ ಚೊಚ್ಚಲ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚು ಎಂದಿದ್ದಾರೆ. 2011ರಲ್ಲಿ ಭಾರತ ಹಾಗೂ 2015ರಲ್ಲಿ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದವು.
ಮೂರು ಬಾರಿ ಪಾಕಿಸ್ತಾನ ಪರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ವಕಾರ್ ಯೂನಿಸ್ ಒಟ್ಟು 22 ವಿಕೆಟ್ ಕಬಳಿಸಿದ್ದರು.