Asianet Suvarna News Asianet Suvarna News

'ಮ್ಯಾಚ್ ಫಿಕ್ಸಿಂಗ್ ಇನ್ನೂ ಜೀವಂತವಾಗಿದೆ'

ಪಾಕಿಸ್ತಾನ ಕ್ರಿಕೆಟ್ ಲೀಗ್'ನ ಮೂರನೇ ಆವೃತ್ತಿಯಲ್ಲಿ ಇಸ್ಲಾಮಾಬಾದ್ ಯುನೈಟೈಡ್ ತಂಡದ ಡೈರೆಕ್ಟರ್ ಆಗಿದ್ದ ವಕಾರ್, ಯುವ ಕ್ರಿಕೆಟಿಗರಿಗೆ ಸ್ಫಾಟ್ ಫಿಕ್ಸಿಂಗ್'ನಿಂದ ದೂರವಿರುವ ಕುರಿತಂತೆ ವಿಶೇಷ ಮಾರ್ಗದರ್ಶನ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮುಂಬರುವ ದಿನಗಳಲ್ಲಿ ವಿದೇಶಿ ಆಟಗಾರರು ಪಾಕಿಸ್ತಾನದಲ್ಲಿ ಆಡಲು ಒಲವು ತೋರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Match fixing still exists at all levels says former Pakistan legend Waqar Younis

ಇಸ್ಲಾಮಾಬಾದ್(ನ.13): ಮ್ಯಾಚ್ ಫಿಕ್ಸಿಂಗ್ ಭೂತ ಕ್ರಿಕೆಟ್‌'ನ ಪ್ರತಿಹಂತದಲ್ಲೂ ಬೇರು ಬಿಟ್ಟಿದ್ದು, ಇಂದಿಗೂ ಜೀವಂತವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್ ಆರೋಪಿಸಿದ್ದಾರೆ.

2018ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟಿ20 ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ವಕಾರ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ‘ಫಿಕ್ಸಿಂಗ್‌'ನ್ನು ಕಿತ್ತೆಸೆಯಲು ಎಲ್ಲರೂ ಒಗ್ಗೂಡಬೇಕು. ಸ್ಪಾಟ್ ಫಿಕ್ಸಿಂಗ್ ಪಾಕ್ ಕ್ರಿಕೆಟ್‌'ನ ಮಾರ್ಯದೆಗೆ ಭಾರೀ ಧಕ್ಕೆಯನ್ನುಂಟು ಮಾಡಿತು. ಆ ಕಹಿ ನೆನಪನ್ನು ಈ ಆವೃತ್ತಿ ದೂರಗೊಳಿಸಲಿದೆ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಲೀಗ್'ನ ಮೂರನೇ ಆವೃತ್ತಿಯಲ್ಲಿ ಇಸ್ಲಾಮಾಬಾದ್ ಯುನೈಟೈಡ್ ತಂಡದ ಡೈರೆಕ್ಟರ್ ಆಗಿದ್ದ ವಕಾರ್, ಯುವ ಕ್ರಿಕೆಟಿಗರಿಗೆ ಸ್ಫಾಟ್ ಫಿಕ್ಸಿಂಗ್'ನಿಂದ ದೂರವಿರುವ ಕುರಿತಂತೆ ವಿಶೇಷ ಮಾರ್ಗದರ್ಶನ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮುಂಬರುವ ದಿನಗಳಲ್ಲಿ ವಿದೇಶಿ ಆಟಗಾರರು ಪಾಕಿಸ್ತಾನದಲ್ಲಿ ಆಡಲು ಒಲವು ತೋರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios