ಇತ್ತೀಚಿಗೆ ನಡೆದ ಟೆಸ್ಟ್ ಸಿರೀಸ್‌ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು, ಅಲ್ಲಿಯ ಮಾಧ್ಯಮಗಳು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದು ಗೊತ್ತಿರೋ ವಿಷಯ. ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಎಡ್ ಕೊವಾನ್ ಈ ಹಿಂದೆ ಮ್ಯಾಚ್‌'ವೊಂದನ್ನು ಆಡುತ್ತಿದ್ದಾಗ ಕೊಹ್ಲಿಯನ್ನು ಸ್ಟಂಪ್‌'ನಿಂದ ಇರಿಯಬೇಕು ಅಂದುಕೊಂಡಿದ್ದೆ ಎಂದಿದ್ದಾನೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎಡ್ ಕೊವಾನ್ ಈ ವಿಷಯ ತಿಳಿಸಿದ್ದಾನೆ.
ಸಿಡ್ನಿ(ಎ.01): ಇತ್ತೀಚಿಗೆ ನಡೆದ ಟೆಸ್ಟ್ ಸಿರೀಸ್ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು, ಅಲ್ಲಿಯ ಮಾಧ್ಯಮಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದು ಗೊತ್ತಿರೋ ವಿಷಯ. ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಎಡ್ ಕೊವಾನ್ ಈ ಹಿಂದೆ ಮ್ಯಾಚ್'ವೊಂದನ್ನು ಆಡುತ್ತಿದ್ದಾಗ ಕೊಹ್ಲಿಯನ್ನು ಸ್ಟಂಪ್'ನಿಂದ ಇರಿಯಬೇಕು ಅಂದುಕೊಂಡಿದ್ದೆ ಎಂದಿದ್ದಾನೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎಡ್ ಕೊವಾನ್ ಈ ವಿಷಯ ತಿಳಿಸಿದ್ದಾನೆ.
‘ಈ ಹಿಂದೆ ಒಂದು ಟೆಸ್ಟ್ ಮ್ಯಾಚ್ ಆಡಿದ್ದಾಗ ವಿರಾಟ್ ಕೊಹ್ಲಿ ನನ್ನ ಬಳಿ ಅನುಚಿತವಾಗಿ ವರ್ತಿಸಿದ್ದ. ನನ್ನನ್ನು ಗದರಿದ್ದ. ಆದರೆ ಆತ ಗದರಿದಾಗ ಬಳಸಿದ ಪದ ನನಗೆ ಅರ್ಥವಾಗಿರಲಿಲ್ಲ. ಆದರೆ ಆ ಪದ ಕೆಟ್ಟ ಪದ. ವೈಯಕ್ತಿಕವಾಗಿ ನಿಂದಿಸಿದ ಪದ ಎಂಬುದು ನನಗೆ ಗೊತ್ತಾಗಿತ್ತು. ಆ ಸಮಯದಲ್ಲಿ ನಾನು ಸ್ಟಂಪ್ನಿಂದ ಇರಿಯೋಣ ಎನ್ನುವಷ್ಟು ಕೋಪ ಬಂದಿತ್ತು. ಆಗ ವಿರಾಟ್ ಕೊಹ್ಲಿಯತ್ತ ಕೋಪದಿಂದ ಓಡಿದ್ದೆ. ಅಂಪೈರ್ ಮಧ್ಯೆ ಬಂದಾಗ ನನ್ನ ಕೋಪವನ್ನು ನಿಯಂತ್ರಿಸಿಕೊಂಡಿದ್ದೆ'' ಎಂದಿದ್ದಾರೆ. ‘ನಾನು ಕೊಹ್ಲಿ ಅಭಿಮಾನಿ. ನನ್ನ ಕೋಪಾವೇಶ ಸ್ವಲ್ಪ ಹೊತ್ತಿನಲ್ಲೇ ಕಂಟ್ರೋಲ್'ಗೆ ಬರಲು ಅದೊಂದು ಕಾರಣ' ಎಂದಿದ್ದಾನೆ. ಆದರೆ ಕೊಹ್ಲಿ ಜೊತೆಗಿನ ಈ ಆ ಘಟನೆ ಯಾವಾಗ ನಡೆದಿತ್ತು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.
