ಶೀಘ್ರದಲ್ಲೇ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು-550 ಕೀ.ಮಿ ಮೈಲೇಜ್!

ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 550 ಕೀ.ಮಿ ಪ್ರಯಾಣ. ಇತರ ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಗಿಂತ ಹೆಚ್ಚಿನ ಮೈಲೇಜ್. ಇದು ಫೋಕ್ಸ್‌ವ್ಯಾಗನ್ ನೂತನ ಎಲೆಕ್ಟ್ರಿಕಲ್ ಕಾರಿನ ವಿಶೇಷತೆ? ಇಲ್ಲಿದೆ ಹೆಚ್ಚಿನ ಮಾಹಿತಿ.

Volkswagen will launch Electric Hatchback Car soon

ಬೆಂಗಳೂರು(ಡಿ.19): ಫೋಕ್ಸ್‌ವ್ಯಾಗನ್ ಶೀಘ್ರದಲ್ಲೇ ಎಲೆಕ್ಟ್ರಿಕಲ್ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ ಮಾಡಲಿದೆ. ವಿಶೇಷ ಅಂದರೆ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 550 ಕೀ.ಮಿ ಪ್ರಯಾಣ ಮಾಡಬಹುದು ಎಂದು ಕಂಪೆನಿ ಹೇಳಿದೆ.   ಈ ಮೂಲಕ ಇತರ ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.

Volkswagen will launch Electric Hatchback Car soon

ಇದನ್ನೂ ಓದಿ: ಭಾರತದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ ಲ್ಯಾಂಬಿ ಸ್ಕೂಟರ್!

ಸದ್ಯ ರೋಡ್ ಟೆಸ್ಟ್ ನಡೆಸುತ್ತಿರುವ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.  ಆದರೆ ಇದರ ಬೆಲೆ 20 ಲಕ್ಷ ರೂಪಾಯಿ. ಈ ಮೂಲಕ ಇದು ಟೆಲ್ಸಾ ಮಾಡೆಲ್ 3 ಹಾಗೂ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ.

Volkswagen will launch Electric Hatchback Car soon

ಇದನ್ನೂ ಓದಿ:2018ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಬೈಕ್!

ಇದು ಫೋಕ್ಸ್‌ವ್ಯಾಗನ್ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು. ಇದರ ಬೆನ್ನಲ್ಲೇ, ಸೆಡಾನ್ ಹಾಗೂ MPV ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಫೋಕ್ಸ್‌ವ್ಯಾಗನ್ ಮುಂದಾಗಿದೆ. ಈಗಾಗಲೇ ಎಮಿಶನ್ ನಿಯಮ ಉಲ್ಲಂಘನೆಯಿಂದ ತೀವ್ರ ಹಿನ್ನಡೆ ಅನುಭವಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಗೆ ಎಲೆಕ್ಟ್ರಿಕ್ ಕಾರು ಹೊಸ ಚೈತನ್ಯ ನೀಡಲಿದೆ.
 

Latest Videos
Follow Us:
Download App:
  • android
  • ios