Asianet Suvarna News Asianet Suvarna News

ವೀವೋ ಪಾಲಾದ ಐಪಿಎಲ್ ಪ್ರಾಯೋಜಕತ್ವ

2016-17ರ ಅವಧಿಯಲ್ಲಿ ವೀವೋ ₹100 ಕೋಟಿಗೆ ಒಪ್ಪಂದ ಮಾಡಿಕೊಂಡಿತ್ತು.

Vivo bags IPL sponsorship rights for another 5 years
  • Facebook
  • Twitter
  • Whatsapp

ನವದೆಹಲಿ(ಜೂ.27): ಮೊಬೈಲ್ ತಯಾರಿಕ ಸಂಸ್ಥೆ ವೀವೋ 2018-2022ರ ಅವಧಿಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಉಳಿಸಿಕೊಂಡಿದ್ದು, ಬಿಸಿಸಿಐನೊಂದಿಗೆ ಬರೋಬ್ಬರಿ ₹2199 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ.

ಕಳೆದ ಗುತ್ತಿಗೆ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಶೇ.554 ರಷ್ಟು ಏರಿಕೆ ಆಗಿರುವುದು ಅಚ್ಚರಿಗೆ ಮೂಡಿಸಿದೆ. 5 ವರ್ಷಗಳ ಅವಧಿಗೆ ಈ ಒಪ್ಪಂದವಿರಲಿದ್ದು, ವಾರ್ಷಿಕ ₹440 ಕೋಟಿ ಹಣ ಬಿಸಿಸಿಐ ಬೊಕ್ಕಸಕ್ಕೆ ಸೇರಲಿದೆ.

2008-12ರ ವರೆಗೂ ಡಿಎಲ್‌'ಎಫ್ ಸಂಸ್ಥೆ ವರ್ಷಕ್ಕೆ ₹40 ಕೋಟಿ ನೀಡುತ್ತಿತ್ತು, 2013-15ರ ವರೆಗೂ ಬಿಸಿಸಿಐಗೆ ಪೆಪ್ಸಿ ಸಂಸ್ಥೆಯಿಂದ ವಾರ್ಷಿಕ ₹79.2 ಕೋಟಿ ಬರುತ್ತಿತ್ತು.

2016-17ರ ಅವಧಿಯಲ್ಲಿ ವೀವೋ ₹100 ಕೋಟಿಗೆ ಒಪ್ಪಂದ ಮಾಡಿಕೊಂಡಿತ್ತು.

Follow Us:
Download App:
  • android
  • ios