ನವದೆಹಲಿ(ಜು.06): ಐದು ಬಾರಿ ವಿಶ್ವ ಚಾಂಪಿಯನ್, ಗ್ರ್ಯಾಂಡ್ ಮಾಸ್ಟರ್ ಭಾರತದ ಅನುಭವಿ ಆಟಗಾರ ವಿಶ್ವನಾಥನ್ ಆನಂದ್ ನಿವೃತ್ತಿಯ ಸುಳಿವು ನೀಡಿದ್ದಾರೆ.

ಇತ್ತೀಚಿನ ಟೂರ್ನಿಗಳಲ್ಲಿ ಅಷ್ಟೇನು ಪ್ರಭಾವಿಯಾಟ ಪ್ರದರ್ಶಿಸದ ವಿಶ್ವನಾಥನ್ ಆನಂದ್, 10 ಆಟಗಾರರಿದ್ದ ಲೆವ್ಯನ್ ಲೆಗ್ ಗ್ರ್ಯಾಂಡ್ ಟೂರ್ನಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತರಾಗಿದ್ದರು.

ಇದಾದ ಬಳಿಕ ಅವರು, ‘ಈ ರೀತಿ ಚೆಸ್ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ರೀತಿ ಆಡುತ್ತಿರುವುದು ನನ್ನನ್ನು ಚಿಂತೆಗೆ ಗುರಿ ಮಾಡುತ್ತಿದೆ’ ಎಂದು ಹೇಳಿಕೆ ನೀಡಿದ್ದರು.

ಈ ಮೂಲಕ ಅನುಭವಿ ಚೆಸ್ ಆಟಗಾರ ನಿವೃತ್ತಿಯ ಸೂಚನೆ ನೀಡಿದ್ದು, ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದೆ.