ಸೆಹ್ವಾಗ್ ಅವರ ಈ ಅಭಿಪ್ರಾಯಯಕ್ಕೆ ಅವರ ಅಭಿಮಾನಿಗಳು ತಲೆದೂಗಿದ್ದಾರೆ. ಆದರೆ ಸೆಹ್ವಾಗ್ ಯಾರ ಬಗ್ಗೆ ಈ ರೀತಿ ಟ್ವೀಟ್ ಮಾಡಿದ್ದಾರೆ ಎಂಬ ಅಭಿಮಾನಿಗಳ ಗೊಂದಲಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ..!
ನವದೆಹಲಿ(ಅ.25): ಸದಾ ಒಂದಿಲ್ಲೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಇದೀಗ ಜೀವನ ಪಾಠ ಹೇಳಲು ಮುಂದಾಗಿದ್ದಾರೆ.
ಹೌದು, ಸೆಲಿಬ್ರಿಟಿಗಳ ಹುಟ್ಟು ಹಬ್ಬಕ್ಕೆ, ವಿಶೇಷ ದಿನಗಳಿಗೆ ವಿನೂತನವಾಗಿ, ತಿಳಿಹಾಸ್ಯದೊಂದಿಗೆ ಟ್ವೀಟ್ ಮಾಡುತ್ತಿದ್ದ ವೀರೂ ಇದೀಗ ಗಂಭೀರವಾಗಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಹ್ವಾಗ್ ಪ್ರಕಾರ, ಜೀವನದಲ್ಲಿ ಮೂರು ಪ್ರಕಾರದ ಜನರು ಸಿಗುತ್ತಾರಂತೆ. ಅದರಲ್ಲಿ
* ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುವವರು
* ಕಷ್ಟದ ಸಂದರ್ಭದಲ್ಲಿ ದೂರ ಸರಿಯುವವರು(ಕೈ ಬಿಡುವವರು)
* ಕಷ್ಟಕ್ಕೆ ನೂಕುವವರು
ಈ ಮೂರು ತರದ ಜನರು ನನಗೆ ಸಿಕ್ಕಿದ್ದಾರೆಂದು ಟ್ವೀಟ್ ಮಾಡಿದ್ದಾರೆ. ಸೆಹ್ವಾಗ್ ಅವರ ಈ ಅಭಿಪ್ರಾಯಯಕ್ಕೆ ಅವರ ಅಭಿಮಾನಿಗಳು ತಲೆದೂಗಿದ್ದಾರೆ. ಆದರೆ ಸೆಹ್ವಾಗ್ ಯಾರ ಬಗ್ಗೆ ಈ ರೀತಿ ಟ್ವೀಟ್ ಮಾಡಿದ್ದಾರೆ ಎಂಬ ಅಭಿಮಾನಿಗಳ ಗೊಂದಲಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ..!
ಆದರೆ ಅವರಲ್ಲೊಬ್ಬ ಅಭಿಮಾನಿ ಆ ಮೂರು ಮಂದಿ ಟೀಂ ಆಟಗಾರರು ಎಂದು ಟ್ವೀಟ್ ಮಾಡಿದ್ದಾರೆ.
