ಕೋಚ್ ಆಯ್ಕೆ ಮಾಡುವವರೊಂದಿಗೆ ನಾನು ಯಾವುದೇ ಸೆಟ್ಟಿಂಗ್ (ಹೊಂದಾಣಿಕೆ) ಮಾಡಿಕೊಳ್ಳದ ಕಾರಣ ಕೋಚ್ ಹುದ್ದೆ ನನ್ನಿಂದ ಕೈತಪ್ಪಿತು ಎಂದು ಸೆಹ್ವಾಗ್ ಶುಕ್ರವಾರ ಹೇಳಿಕೆ ನೀಡಿದ್ದರು.

ಕೋಲ್ಕತಾ(ಸೆ.16): ಕೋಚ್ ಆಯ್ಕೆ ಸಂಬಂಧ ವೀರೇಂದ್ರ ಸೆಹ್ವಾಗ್ ನೀಡಿರುವ ಹೇಳಿಕೆ ಮೂರ್ಖತನದಿಂದ ಕೂಡಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

‘ಸೆಹ್ವಾಗ್ ಹೇಳಿಕೆ ಕುರಿತು ನಾನು ಏನ್ನನ್ನು ಹೇಳುವುದಿಲ್ಲ. ಮೂರ್ಖನಂತೆ ಮಾತನಾಡಿದ್ದಾರೆ ಅಷ್ಟೆ’ ಎಂದು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರೂ ಆಗಿರುವ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ವಿಷಯವನ್ನು ಎಳೆದಾಡುವುದು ಬೇಡ ಎಂದಿದ್ದಾರೆ.

ಕೋಚ್ ಆಯ್ಕೆ ಮಾಡುವವರೊಂದಿಗೆ ನಾನು ಯಾವುದೇ ಸೆಟ್ಟಿಂಗ್ (ಹೊಂದಾಣಿಕೆ) ಮಾಡಿಕೊಳ್ಳದ ಕಾರಣ ಕೋಚ್ ಹುದ್ದೆ ನನ್ನಿಂದ ಕೈತಪ್ಪಿತು ಎಂದು ಸೆಹ್ವಾಗ್ ಶುಕ್ರವಾರ ಹೇಳಿಕೆ ನೀಡಿದ್ದರು.