ಇಂಡೋ-ಆಫ್ರಿಕಾ ಟೂರ್ನಿಯಲ್ಲಿ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಟೇನ್ ಕರಾರುವಕ್ಕಾದ ಯಾರ್ಕರ್'ಗೆ ಕ್ರಿಕೆಟ್ ಅಭಿಮಾನಿಗಳು ಹಲವಾರು ಬಾರಿ ಸಾಕ್ಷಿಯಾಗಿದ್ದಾರೆ.
ನವದೆಹಲಿ(ಜೂ.27): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಮುಲ್ತಾನಿನ ಸುಲ್ತಾನ ಖ್ಯಾತಿಯ ವಿರೇಂದ್ರ ಸೆಹ್ವಾಗ್ ದಕ್ಷಿಣ ಆಫ್ರಿಕಾದ ಸ್ಪೀಡ್ ಗನ್ ಡೇಲ್ ಸ್ಟೈನ್'ಗೆ ವಿನೂತನವಾಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ.
ಇಂಡೋ-ಆಫ್ರಿಕಾ ಟೂರ್ನಿಯಲ್ಲಿ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಟೇನ್ ಕರಾರುವಕ್ಕಾದ ಯಾರ್ಕರ್'ಗೆ ಕ್ರಿಕೆಟ್ ಅಭಿಮಾನಿಗಳು ಹಲವಾರು ಬಾರಿ ಸಾಕ್ಷಿಯಾಗಿದ್ದಾರೆ. ಮೈದಾನದಲ್ಲಿ ಇವರಿಬ್ಬರು ಬದ್ಧ ಎದುರಾಳಿಗಳಾಗಿದ್ದರೂ ಎನ್ನುವುದು ಎಷ್ಟು ಸತ್ಯವೋ, ಮೈದಾನದಾಚೆಗೆ ಸೆಹ್ವಾಗ್ ಮತ್ತು ಸ್ಟೈನ್ ಉತ್ತಮ ಗೆಳೆಯರು ಎನ್ನುವುದೂ ಅಷ್ಟೇ ಸತ್ಯ.
ಇಂದು ಸ್ಟೈನ್ 34ನೇ ವಸಂತಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಸೆಹ್ವಾಗ್ ಆಫ್ರಿಕಾದ ವೇಗಿಗೆ ಶುಭಕೋರಿದ್ದು ಹೀಗೆ..
ಸೆಹ್ವಾಗ್ ಟ್ವೀಟ್'ಗೆ ಸ್ಟೈನ್ ಧನ್ಯವಾದ ಅರ್ಪಿಸಿದ್ದು ಹೀಗೆ..
