2ನೇ ಆವೃತ್ತಿಯ ಟಿ10 ಲೀಗ್‌ನಲ್ಲಿ ಸೆಹ್ವಾಗ್‌ರೊಂದಿಗೆ, ಪಾಕಿಸ್ತಾನ ಶಾಹಿದ್‌ ಅಫ್ರಿದಿ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಕಲಮ್‌ ಕೂಡ ತಾರಾ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. 

ದುಬೈ[ಅ.04]: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ನವೆಂಬರ್‌ 23ರಿಂದ ಆರಂಭವಾಗಲಿರುವ ವಿಶ್ವದ ಮೊದಲ ಅಧಿಕೃತ ಟಿ10 ಲೀಗ್‌ನಲ್ಲಿ ತಾರಾ ಆಟಗಾರನಾಗಿ ನೇಮಕಗೊಂಡಿದ್ದಾರೆ. 

2ನೇ ಆವೃತ್ತಿಯ ಟಿ10 ಲೀಗ್‌ನಲ್ಲಿ ಸೆಹ್ವಾಗ್‌ರೊಂದಿಗೆ, ಪಾಕಿಸ್ತಾನ ಶಾಹಿದ್‌ ಅಫ್ರಿದಿ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಕಲಮ್‌ ಕೂಡ ತಾರಾ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನು ಓದಿ:ವೀರೇಂದ್ರ ಸೆಹ್ವಾಗ್ ಅಬ್ಬರ-ಕಿಚ್ಚ ಸುದೀಪ್ ತಂಡಕ್ಕೆ ಗೆಲುವು

ಟಿ10 ಲೀಗ್‌ನ ಮೊದಲ ಆವೃತ್ತಿಗೆ ಮಾನ್ಯತೆ ನೀಡದ ಐಸಿಸಿ, 2ನೇ ಆವೃತ್ತಿಗೆ ಹಸಿರು ನಿಶಾನೆ ತೋರಿದೆ. 10 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ 8 ತಂಡಗಳು ಸೆಣಸಲಿದ್ದು, ಒಟ್ಟು 29 ಪಂದ್ಯಗಳು ನಡೆಯಲಿವೆ. ಶೇನ್‌ ವಾಟ್ಸನ್‌, ಇಯಾನ್‌ ಮಾರ್ಗನ್‌, ರಶೀದ್‌ ಖಾನ್‌, ಶೋಯಿಬ್‌ ಮಲಿಕ್‌, ಸುನಿಲ್‌ ನರೈನ್‌, ಡ್ಯಾರೆನ್‌ ಸಮಿ ಸೇರಿ ಇನ್ನಿತರ ಖ್ಯಾತ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ.