ಎರಡು ತ್ರಿಶತಕ ಸಿಡಿಸಿ ದಾಖಲೆ ಬರೆದಿರುವ ವಿರೇಂದ್ರ ಸೆಹ್ವಾಗ್, ಕನ್ನಡಿಗನ ತ್ರಿಶತಕ ಸಾಧನೆಯನ್ನು ಕೊಂಡಾಡಿದ್ದು ಹೀಗೆ
ಚೆನ್ನೈ(ಡಿ.19): ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್'ನಲ್ಲಿ ಕನ್ನಡಿಗ ಕರಣ್ ನಾಯರ್ ಚೊಚ್ಚಲ ತ್ರಿಶತಕ ಸಿಡಿಸಿದ ಬೆನ್ನಲ್ಲೇ ವಿರೇಂದ್ರ ಸೆಹ್ವಾಗ್ 300 ರನ್ ಸಿಡಿಸಿದವರ ಕ್ಲಬ್'ಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ವಿರೇಂದ್ರ ಸೆಹ್ವಾಗ್ ನಂತರ 300 ರನ್ ಬಾರಿಸಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಕರಣ್ ನಾಯರ್ ಪಾತ್ರರಾಗಿದ್ದಾರೆ.
ಪಾಕಿಸ್ತಾನದ ವಿರುದ್ಧ ಪಾಕ್ ನೆಲದಲ್ಲೇ ಚೊಚ್ಚಲ ತ್ರಿಶತಕ(309) ಬಾರಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದ ಮುಲ್ತಾನಿನ ಸುಲ್ತಾನ, ಚೆನ್ನೈ'ನ ಚಿದಂಬರಂ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 319 ರನ್ ಸಿಡಿಸಿ ಎರಡನೇ ಬಾರಿಗೆ ತ್ರಿಶತಕ ಸಾಧನೆಯನ್ನು ಸೆಹ್ವಾಗ್ ಮಾಡಿದ್ದರು.
ಇನ್ನು ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಕರಣ್ ನಾಯರ್ ಕೂಡಾ ತ್ರಿಶತಕ ಬಾರಿಸುವ ಮೂಲಕ ಇಬ್ಬರು ಭಾರತೀಯ ಆಟಗಾರರು ತ್ರಿಶತಕ ಬಾರಿಸಿದ ದಾಖಲೆಗೆ ಸಾಕ್ಷಿಯಾದಂತಾಗಿದೆ.
ಎರಡು ತ್ರಿಶತಕ ಸಿಡಿಸಿ ದಾಖಲೆ ಬರೆದಿರುವ ವಿರೇಂದ್ರ ಸೆಹ್ವಾಗ್, ಕನ್ನಡಿಗನ ತ್ರಿಶತಕ ಸಾಧನೆಯನ್ನು ಕೊಂಡಾಡಿದ್ದು ಹೀಗೆ...
