ನವದೆಹಲಿ(ಅ.05): ತಮ್ಮ ಸ್ಪೋಟಕ ಬ್ಯಾಟಿಂಗ್ ಹಾಗೂ ಹಾಸ್ಯ ಪ್ರೌವೃತ್ತಿಯಿಂದ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿಯಾಗಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರನ್ನು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಕೊಂಡಾಡಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣ ಟ್ವಿಟ್ಟರ್’ನಲ್ಲಿ ಸಕ್ರಿಯವಾಗಿರುವ ಸೆಹ್ವಾಗ್ ವಿನೂತನ ಶೈಲಿಗಳಲ್ಲಿ ಟ್ವೀಟ್ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳೊಂದಿಗೆ ತಮ್ಮ ಸಂಪರ್ಕವನ್ನು ಮುಂದುವರೆಸಿದ್ದಾರೆ.
140 ಅಕ್ಷರಗಳ ಟ್ವಿಟ್ಟರ್’ಅನ್ನು ಸೆಹ್ವಾಗ್ ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಮೊದಲೇ ತಂತ್ರಜ್ಞಾನದ ಯುಗ. ಟೆಸ್ಟ್ ಕ್ರಿಕೆಟ್’ನ್ನು ಉತ್ತೇಜಿಸಲು ಟ್ವಿಟ್ಟರ್ ಸರಿಯಾದ ವೇದಿಕೆಯಾಗಿದೆ. ಸೆಹ್ವಾಗ್ ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಂ ಇಂಡಿಯಾದ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
