ಚೀನಾ ಆಟಗಾರನೆದುರು ವಿಜೇಂದರ್ ಹೋರಾಡಿದ ರೀತಿಯನ್ನು ನೋಡಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಶುಭಕೋರಿದ್ದು ಹೀಗೆ...
ನವದೆಹಲಿ(ಆ.06): ಶನಿವಾರ ನಡೆದ ಡಬ್ಲ್ಯೂಬಿಓ ಏಷ್ಯಾ ಫೆಸಿಫಿಕಲ್ ಸೂಪರ್ ಮಿಡ್ಲ್'ವೇಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ.
ಚೀನಾದ ಜುಲ್ಫಿಕರ್ ಮೈಮೈಟಿಯಾಲಿಯನ್ನು ರೋಚಕ ಕಾದಾಟದಲ್ಲಿ ಮಣಿಸಿದ ವಿಜೇಂದರ್ ಸತತ ಎರಡನೇ ಪ್ರಶಸ್ತಿ ಜಯಿಸುವಲ್ಲಿ ಸಫಲವಾದರು. ವೃತ್ತಿಪರ ಬಾಕ್ಸಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ವಿಜೇಂದರ್ ಸತತ 9 ಗೆಲುವು ಕೂಡಾ ದಾಖಲಿಸಿದ್ದಾರೆ.
ಚೀನಾ ಆಟಗಾರನೆದುರು ವಿಜೇಂದರ್ ಹೋರಾಡಿದ ರೀತಿಯನ್ನು ನೋಡಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಶುಭಕೋರಿದ್ದು ಹೀಗೆ...