11 ಮಂದಿ ನ್ಯಾಯಾಧೀಶರಿದ್ದ ಬೆಂಚ್'ನಿಂದ ತೀರ್ಪು ಹೊರಬೀಳುತ್ತಿದ್ದಂತೆ ವಿರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿ(ಮೇ.18): ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ನೇಣಿಗೇರಿಸುವ ಪಾಕಿಸ್ತಾನದ ತೀರ್ಮಾನಕ್ಕೆ ತಡೆಯಾಜ್ಞೆ ಹೇರಿರುವ ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ್ನು ಟೀಂ ಇಂಡಿಯಾ ಮಾಜಿ ಆಟಗಾರ ಸ್ವಾಗತಿಸಿದ್ದಾರೆ.
11 ಮಂದಿ ನ್ಯಾಯಾಧೀಶರಿದ್ದ ಬೆಂಚ್'ನಿಂದ ತೀರ್ಪು ಹೊರಬೀಳುತ್ತಿದ್ದಂತೆ ವಿರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿದ್ದಾರೆ.
ಇದಾದ ಬಳಿಕ ಪಾಕ್ ಮೂಲದ ವ್ಯಕ್ತಿಯೋರ್ವ ಜಾಧವ್ ಅವರನ್ನು ಖಂಡಿತ ಗಲ್ಲಿಗೇರಿಸುತ್ತೇವೆ ಎಂದು ಮಾಡಿದ ಟ್ವೀಟ್'ಗೆ ಭರ್ಜರಿಯಾಗಿಯೇ ಸಿಕ್ಸರ್ ಬಾರಿಸಿರುವ ಸೆಹ್ವಾಗ್, ಜಾಧವ್ ಅವರನ್ನು ಗಲ್ಲಿಗೇರಿಸುವುದು, ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಪಾಕಿಸ್ತಾನ ಮಣಿಸುವುದು ಎರಡೂ ಕನಸು. ಅದೆಂದಿಗೂ ನನಸಾಗಲು ಸಾಧ್ಯವಿಲ್ಲ ಎಂದು ಮುಲ್ತಾನಿನ ಸುಲ್ತಾನ ಹೇಳಿದ್ದಾರೆ
ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಅಧಿಕಾರಿಗಳು ಮೇ 2016ರಲ್ಲಿ ಭಾರತದ ಪರ ಪಾಕಿಸ್ತಾನದಲ್ಲಿ ಗುಪ್ತಚಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದಡಿ ಬಂಧಿಸಲಾಗಿದೆ. ಆ ಬಳಿಕ ಪಾಕಿಸ್ತಾನ ಮಿಲಿಟರಿ ಕೋರ್ಟ್ ಕಳೆದ ತಿಂಗಳಷ್ಟೇ ಜಾಧವ್ ಅವರನ್ನು ಗಲ್ಲಿಗೇರಿಸಲು ಆದೇಶ ಹೊರಡಿಸಿತ್ತು.
