ಸೆಹ್ವಾಗ್, 'ನಿಮ್ಮ ಹಿಂದಿ ಬಳಕೆ ಅದ್ಭುತವಾಗಿದೆ. ಇದರಿಂದ ನಾನು ಪ್ರಭಾವಿತನಾಗಿದ್ದೇನೆ. ಹಾಗಾಗಿ ರಾಸ್ ಟೇಲರ್'ಗೆ ಆಧಾರ್ ಕಾರ್ಡ್ ನೀಡಿ' ಎಂದು ಆಧಾರ್ ನೀಡುವ ಸಂಸ್ಥೆ(UIDAI)ಗೆ ಮನವಿ ಮಾಡಿಕೊಂಡಿದ್ದಾರೆ.

ಇಲ್ಲಿಯವರೆಗೆ ಸಾಮಾಜಿಕ ಜಾಲತಾಣದಲ್ಲಿ ಬೇರೆಯವರ ಕಾಲೆಳೆಯುತ್ತಿದ್ದ ವಿರೇಂದ್ರ ಸೆಹ್ವಾಗ್'ಗೆ ಈಗ ಟೈಂ ಸರಿ ಇಲ್ಲ ಅನ್ನೋ ಹಾಗೆ ಕಾಣ್ತಾ ಇದೆ.

ಹೌದು ಇತ್ತೀಚೆಗೆ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್'ನನ್ನು ದರ್ಜಿ ಎಂದು ಕರೆದು ಕೀಟಲೆ ಮಾಡಿದ್ದ ವೀರೂಗೆ ಕಿವೀಸ್ ಬ್ಯಾಟ್ಸ್'ಮನ್ ಹಿಂದಿಯಲ್ಲೇ ಸರಿಯಾಗ್ಗೆ ಟಾಂಗ್ ನೀಡಿದ್ದರು.

ಆದರೆ ರಾಜ್'ಕೋಟ್'ನಲ್ಲಿ ಮುಕ್ತಾಯದ ಎರಡನೇ ಟಿ20 ಪಂದ್ಯದ ಬಳಿಕ ಟ್ವೀಟ್ ಮಾಡಿದ್ದ ರಾಸ್ ಟೇಲರ್, 'ರಾಜ್'ಕೋಟ್ ಪಂದ್ಯದ ಬಳಿಕ (ದರ್ಜಿ) ಟೈಲರ್ ಅಂಗಡಿ ಮುಚ್ಚಿದೆ, ಮುಂದಿನ ಹೊಲಿಗೆ ತ್ರಿವೆಂಡ್ರಂನಲ್ಲಿ ಎಂದು ಹಿಂದಿಯಲ್ಲಿಯೇ ಮತ್ತೊಮ್ಮೆ ಟ್ವೀಟ್ ಮಾಡಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತು.

ಆದರೂ ಪಟ್ಟು ಬಿಡದ ಸೆಹ್ವಾಗ್, 'ನಿಮ್ಮ ಹಿಂದಿ ಬಳಕೆ ಅದ್ಭುತವಾಗಿದೆ. ಇದರಿಂದ ನಾನು ಪ್ರಭಾವಿತನಾಗಿದ್ದೇನೆ. ಹಾಗಾಗಿ ರಾಸ್ ಟೇಲರ್'ಗೆ ಆಧಾರ್ ಕಾರ್ಡ್ ನೀಡಿ' ಎಂದು ಆಧಾರ್ ನೀಡುವ ಸಂಸ್ಥೆ(UIDAI)ಗೆ ಮನವಿ ಮಾಡಿಕೊಂಡಿದ್ದಾರೆ.

Scroll to load tweet…
Scroll to load tweet…

ಇದಕ್ಕೆ ಅಷ್ಟೇ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿರುವ ಆಧಾರ್ ಸಂಸ್ಥೆ, ಭಾಷೆ ಬಂದರಷ್ಟೇ ಸಾಲದು, ದೇಶದ ನಿವಾಸಿಯೂ ಆಗಿರಬೇಕು ಎಂದು ಟ್ವೀಟ್ ಮಾಡಿದೆ.

ಒಟ್ಟಿನಲ್ಲಿ ಸೆಹ್ವಾಗ್ ಏನೇ ಹೇಳಿದರೂ ಅವರಿಗೇ ಉಲ್ಟಾ ಹೊಡೆಯುತ್ತಿರುವುದು ಮಾತ್ರ ವಿಪರ್ಯಾಸ...