ವಿರಾಟ್ ಕೊಹ್ಲಿ ಮೇಣದ ಪ್ರತಿಮೆಗೆ ಹಾನಿ

Virat Kohli Wax Statue At Madame Tussauds Damaged
Highlights

ಪ್ರತಿಮೆಯ ಬಲ ಕಿವಿಯ ಮೇಲ್ಭಾಗ ಹಾನಿಯಾಗಿತ್ತು. ತಕ್ಷಣವೇ ಇದನ್ನು ಗಮನಿಸಿದ ಮೇಡಂ ಟುಸ್ಸಾಡ್ಸ್ ಸಿಬ್ಬಂದಿ, ಶೀಘ್ರ ದುರಸ್ತಿಗೊಳಿಸಿ ಮತ್ತೆ ಸಾರ್ವಜನಿಕ ವೀಕ್ಷಣೆಗೆ ಅನುವುಮಾಡಿಕೊಟ್ಟಿದ್ದಾರೆ. 

ನವದೆಹಲಿ(ಜೂ.09): ಇಲ್ಲಿನ ಮೇಡಂ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣಗೊಂಡು ಕೇವಲ 2-3 ದಿನಗಳಲ್ಲೇ ಹಾನಿಯಾಗಿದೆ. 

ಪ್ರತಿಮೆಯ ಬಲ ಕಿವಿಯ ಮೇಲ್ಭಾಗ ಹಾನಿಯಾಗಿತ್ತು. ತಕ್ಷಣವೇ ಇದನ್ನು ಗಮನಿಸಿದ ಮೇಡಂ ಟುಸ್ಸಾಡ್ಸ್ ಸಿಬ್ಬಂದಿ, ಶೀಘ್ರ ದುರಸ್ತಿಗೊಳಿಸಿ ಮತ್ತೆ ಸಾರ್ವಜನಿಕ ವೀಕ್ಷಣೆಗೆ ಅನುವುಮಾಡಿಕೊಟ್ಟಿದ್ದಾರೆ.

ಕೊಹ್ಲಿ ಪ್ರತಿಮೆ ಅನಾವರಣಗೊಂಡ ದಿನವೇ ಸಾಕಷ್ಟು ಅಭಿಮಾನಿಗಳನ್ನು ಆಕರ್ಷಿಸಿಸಿತ್ತು. ಈ ವೇಳೆ ಅಭಿಮಾನಿಗಳು ವೀಕ್ಷಣೆ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಈ ಹಾನಿ ಸಂಭವಿಸಿದೆ ಎನ್ನಲಾಗಿದೆ.

loader