ಜಮೈಕಾ(ಆ.31): ವೆಸ್ಟ್ ಇಂಡೀಸ್ ವಿರುದ್ದದ 2ನೇ ಪಂದ್ಯದ ಮೊದಲ ದಿನ ಭಾರತ ಅಬ್ಬರಿಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 264 ರನ್ ಸಿಡಿಸಿತು. ದಿನದಾಟದ ಬಳಿಕ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ನೆರೆದಿದ್ದ ಜಮೈಕಾ ಅಭಿಮಾನಿಗಳಿಗೆ ಸ್ಪೆಷಲ್ ಉಡುಗೊರೆ ನೀಡಿದರು.

ಇದನ್ನೂ ಓದಿ: ಮಯಾಂಕ್ -ಕೊಹ್ಲಿ ಫಿಫ್ಟಿ: ಬೃಹತ್ ಮೊತ್ತದತ್ತ ಭಾರತ

ದಿನದಾಟದ ಬಳಿಕ ವಿರಾಟ್ ಕೊಹ್ಲಿ ನೇರವಾಗಿ ಕ್ರೀಡಾಂಗಣದ ಗ್ಯಾಲರಿ ಬಳಿ ತೆರಳಿದರು. ಜಮೈಕಾ ಕ್ರಿಕೆಟ್ ಅಭಿಮಾನಿಗಳಿಗೆ ಆಟೋಗ್ರಾಫ್ ಹಾಗೂ ಸೆಲ್ಫಿ ನೀಡಿದರು. ಕೊಹ್ಲಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತಾಳ್ಮೆಯಿಂದ ಆಟೋಗ್ರಾಫ್ ಸಹಿ ಮಾಡಿದರು. 

 

ಇದನ್ನೂ ಓದಿ: ಪ್ರಧಾನಿ ಮೋದಿ ಕನಸು; ಮೊಟೆರಾ ಕ್ರೀಡಾಂಗಣಕ್ಕೆ ಹೊಸ ರೂಪ!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು  ಸಾಧಿಸಿದ ಟೀಂ ಇಂಡಿಯಾ ಇದೀಗ 2ನೇ ಟೆಸ್ಟ್ ಪಂದ್ಯ ಆಡುತ್ತಿದೆ. ಈ ಪಂದ್ಯದಲ್ಲೂ ಗೆಲುವು ಸಾಧಿಸಿ, ಸರಣಿ ವೈಟ್ ವಾಶ್ ಮಾಡಲು ಕೊಹ್ಲಿ ಸೈನ್ಯ ತಯಾರಿ ನಡೆಸಿದೆ.