Asianet Suvarna News Asianet Suvarna News

ಕೊಹ್ಲಿಗೆ ವರ್ಷದ ಕ್ರಿಕೆಟಿಗ ಗೌರವ; ಮಯಾಂಕ್’ಗೆ ಒಲಿದ ಪ್ರಶಸ್ತಿ

ಬಿಸಿಸಿಐ 2016-17, 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿ ಪ್ರಕಟಗೊಳಿಸಿತು. ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ (2016-17, 2017-18)ನಿಗೆ ನೀಡುವ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಜೂನ್ 12ರಂದು ಬೆಂಗಳೂರಲ್ಲಿ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Virat Kohli set to receive Polly Umrigar award

ನವದೆಹಲಿ(ಜೂ.08]: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ಅವರಿಗೆ 2 ಋತುಗಳಿಗೆ ಬಿಸಿಸಿಐನ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ತಂದುಕೊಟ್ಟಿದೆ. ಇದೇ ವೇಳೆ ಮಹಿಳಾ ಕ್ರಿಕೆಟ್ ತಾರೆಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮತಿ ಮಂಧನಾ ಸಹ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಿಸಿಸಿಐ 2016-17, 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿ ಪ್ರಕಟಗೊಳಿಸಿತು. ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ (2016-17, 2017-18)ನಿಗೆ ನೀಡುವ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಜೂನ್ 12ರಂದು ಬೆಂಗಳೂರಲ್ಲಿ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

2016-17ನೇ ಋತುವಿನಲ್ಲಿ 13 ಟೆಸ್ಟ್‌ಗಳಿಂದ 1332 ರನ್ ಗಳಿಸಿದ್ದ ಕೊಹ್ಲಿ, 27 ಏಕದಿನ ಪಂದ್ಯಗಳಲ್ಲಿ 1516 ರನ್ ಕಲೆಹಾಕಿದ್ದರು. 2017-18ರಲ್ಲಿ ಆಡಿದ 6 ಟೆಸ್ಟ್ ಗಳಲ್ಲಿ 896 ರನ್ ಗಳಿಸಿರುವ ವಿರಾಟ್, ಏಕದಿನದಲ್ಲಿ 75.50 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಕೊಹ್ಲಿ ಪ್ರತಿ ಋತುವಿಗೆ ತಲಾ ₹15 ಲಕ್ಷ ಬಹುಮಾನ ಸ್ವೀಕರಿಸಲಿದ್ದಾರೆ. ಕಳೆದ ವರ್ಷ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಮನ್‌ಪ್ರೀತ್(2016-17), ಸ್ಮತಿ (2017-18)ರ ಶ್ರೇಷ್ಠ ಆಟಗಾರ್ತಿಯರಾಗಿ ಹೊರಹೊಮ್ಮಿದ್ದಾರೆ. ಬಿಸಿಸಿಐ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟರ್‌ಗಳಿಗೆ ಪ್ರಶಸ್ತಿ ನೀಡುತ್ತಿದ್ದು, ಚೊಚ್ಚಲ ಪ್ರಶಸ್ತಿಗೆ ಭಾಜನರಾಗುತ್ತಿರುವ ಕೀರ್ತಿ ಹರ್ಮನ್, ಸ್ಮತಿದಾಗಿದೆ.

2016-17ರ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ದಿಗ್ಗಜ ಬ್ಯಾಟ್ಸ್‌ಮನ್, ದಿವಂಗತ ಪಂಕಜ್ ರಾಯ್‌ಗೆ ನೀಡಲು ಬಿಸಿಸಿಐ ನಿರ್ಧರಿಸಿದೆ. 2017-18ರ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಅನ್ಶುಮಾನ್ ಗಾಯಕ್ವಾಡ್‌ಗೆ ದೊರೆಯಲಿದೆ. 

ಮಯಾಂಕ್‌ಗೆ ಪ್ರಶಸ್ತಿ:
2017-18ರ ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಕರ್ನಾಟಕದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಬಾರಿ ದೇಸಿ ಕ್ರಿಕೆಟರ್‌ಗಳಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ಬಿಸಿಸಿಐ ಏರಿಕೆ ಮಾಡಿದೆ.

Follow Us:
Download App:
  • android
  • ios