ಐಪಿಎಲ್ ಬಳಿಕ ಹೊಸ ನಾಯಕ ಕೆಳಗೆ ಆಡಲಿದ್ದಾರೆ ಕೊಹ್ಲಿ

Virat Kohli Set To Play Under New Skipper At Surrey
Highlights

ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವ 6ನೇ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೆ ವಿರಾಟ್ ಕೊಹ್ಲಿ ಪಾತ್ರರಾಗುತ್ತಿದ್ದಾರೆ. ಸರ್ರೆ ತಂಡವನ್ನು ಪ್ರತಿನಿಧಿಸಿದ ಮೊಟ್ಟ ಮೊದಲ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಜಹೀರ್ ಖಾನ್ ಪಾತ್ರರಾಗಿದ್ದರು. 2004ರಲ್ಲಿ ಎಡಗೈ ವೇಗಿ ಸರ್ರೆ ತಂಡ ಕೂಡಿಕೊಂಡಿದ್ದರು.

ಮುಂಬೈ[ಮೇ.21]: ಐಪಿಎಲ್ ಮುಕ್ತಾಯದ ಬಳಿಕ ಇಂಗ್ಲೀಷ್ ಕೌಂಟಿ ತಂಡ ಸರ್ರೆಯನ್ನು ಕೂಡಿಕೊಳ್ಳಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಕೌಂಟಿಯ ಖ್ಯಾತ ಆಟಗಾರ ರೋರಿ ಬರ್ನ್ಸ್ ನಾಯಕತ್ವದಲ್ಲಿ ಆಡಲಿದ್ದಾರೆ.

ಸರ್ರೆ ನಾಯಕ ರೋರಿ ಬರ್ನ್ಸ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ಕೌಂಟಿಯಲ್ಲಿ 12 ಶತಕ ಮತ್ತು 35 ಅರ್ಧ ಶತಕಗಳೊಂದಿಗೆ ಒಟ್ಟು 6548 ರನ್ ಬಾರಿಸಿದ್ದಾರೆ. ಕೊಹ್ಲಿ ಸರ್ರೆ ಪರ 3 ಏಕದಿನ ಹಾಗೂ ಮೂರು 4 ದಿನಗಳ ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಗೈರಾಗಲಿದ್ದಾರೆ.

ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವ 6ನೇ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೆ ವಿರಾಟ್ ಕೊಹ್ಲಿ ಪಾತ್ರರಾಗುತ್ತಿದ್ದಾರೆ. ಸರ್ರೆ ತಂಡವನ್ನು ಪ್ರತಿನಿಧಿಸಿದ ಮೊಟ್ಟ ಮೊದಲ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಜಹೀರ್ ಖಾನ್ ಪಾತ್ರರಾಗಿದ್ದರು. 2004ರಲ್ಲಿ ಎಡಗೈ ವೇಗಿ ಸರ್ರೆ ತಂಡ ಕೂಡಿಕೊಂಡಿದ್ದರು. ಆ ಬಳಿಕ ಹರ್ಭಜನ್ ಸಿಂಗ್[2004 ಮತ್ತು 2007], ಅನಿಲ್ ಕುಂಬ್ಳೆ[2006] ಪ್ರಜ್ಞಾನ್ ಓಜಾ[2011] ಹಾಗೂ ಮರುಳಿ ಕಾರ್ತಿಕ್[2012] ಸರ್ರೆ ತಂಡವನ್ನು ಪ್ರತಿನಿಧಿಸಿದ ಭಾರತದ ಇತರ ಕ್ರಿಕೆಟಿಗರೆನಿಸಿದ್ದಾರೆ.  

loader