Asianet Suvarna News Asianet Suvarna News

2016ರಲ್ಲಿ ದಾಖಲೆಯ ಶಿಖರವೇರಿದ ವಿರಾಟ್ ಕೊಹ್ಲಿ.. ಇಲ್ಲಿದೆ ಬರ್ತ್ ಡೇ ಬಾಯ್ ರೆಕಾರ್ಡ್ಸ್

ಟೀಮ್ ಇಂಡಿಯಾದ ಯಶಸ್ವಿ ಬ್ಯಾಟ್ಸ್`ಮನ್, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಬ್ಬರದ ಬ್ಯಾಟಿಂಗ್`ನೊಂದಿಗೆ 2016 ಅನ್ನ ಆರಂಭಿಸಿದ ಕೊಹ್ಲಿ ಈ ವರ್ಷ ಅನೇಕ ದಾಖಲೆಗಳನ್ನ ಬರೆದಿದ್ದಾರೆ. ಈ ವರ್ಷ  ಬಹುಬೇಗ 25 ಶತಕಗಳ ಸಾಧನೆ, ವೇಗದ 7500 ರನ್ ಮತ್ತು ಚೇಸಿಂಗ್`ನಲ್ಲಿ 14 ಸೆಂಚುರಿ ಸಿಡಿಸುವ ಮೂಲಕ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.

virat kohli records in 2016

ನವದೆಹಲಿ(ನ.05): ಟೀಮ್ ಇಂಡಿಯಾದ ಯಶಸ್ವಿ ಬ್ಯಾಟ್ಸ್`ಮನ್, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಬ್ಬರದ ಬ್ಯಾಟಿಂಗ್`ನೊಂದಿಗೆ 2016 ಅನ್ನ ಆರಂಭಿಸಿದ ಕೊಹ್ಲಿ ಈ ವರ್ಷ ಅನೇಕ ದಾಖಲೆಗಳನ್ನ ಬರೆದಿದ್ದಾರೆ. ಈ ವರ್ಷ  ಬಹುಬೇಗ 25 ಶತಕಗಳ ಸಾಧನೆ, ವೇಗದ 7500 ರನ್ ಮತ್ತು ಚೇಸಿಂಗ್`ನಲ್ಲಿ 14 ಸೆಂಚುರಿ ಸಿಡಿಸುವ ಮೂಲಕ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ 2 ಶತಕ: ವರ್ಷಾರಂಭದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. 1-4 ಅಂತರದಿಂದ ಧೋನಿ ಪಡೆ ಏಕದಿನ ಸರಣಿಯಲ್ಲಿ ಸೋತರೂ ಕೊಹ್ಲಿ ಮಾತ್ರ 76.20 ಸರಾಸರಿಯಲ್ಲಿ 381 ರನ್ ಸಿಡಿಸಿದ್ದರು. ಇದರಲ್ಲಿ 2 ಶತಕ 2 ಅರ್ಧಶತಕಗಳಿದ್ದವು. ಬಳಿಕ ನಡೆದ ಟಿ-20 ಸರಣಿಯಲ್ಲಿ ಭಾರತ, ಆಸ್ಟ್ರೇಲಿಯಾವನ್ನ 3-0 ಅಂತರದಿಂದ ಬಗ್ಗು ಪಡೆಯಿತು. ಇದರಲ್ಲಿ ಕೊಹ್ಲಿ 3 ಅರ್ಧಶತಕಗಳನ್ನೊಳಗೊಂಡ 199 ರನ್ ಸಿಡಿಸಿದ್ದರು.

ಏಷ್ಯಾ ಕಪ್`ನಲ್ಲಿ ದಾಖಲೆ:

ಈ ವರ್ಷ ಭಾರತ ತಂಡ ಏಷ್ಯಾ ಕಪ್ ಸರಣಿಯನ್ನ ಗೆದ್ದು ಬೀಗಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಪಾತ್ರ ಬಹಳಷ್ಟಿತ್ತು. 136 ಸ್ಟ್ರೈಕ್ ರೇಟ್`ನೊಂದಿಗೆ 5 ಪಂದ್ಯಗಳಲ್ಲಿ 273 ರನ್ ಕೆಲಹಾಕಿದ್ದರು.

ಐಪಿಎಲ್`ನಲ್ಲಿ ರನ್ ಹೊಳೆ: ಏಕದಿನ, ಟೆಸ್ಟ್ ಪಂದ್ಯಗಳಲ್ಲೇ ಕೊಹ್ಲಿ ಬ್ಯಾಟ್`ನಿಂದ ರನ್ ಹೊಳೆ ಹರಿಯುತ್ತೆ. ಇನ್ನೂ ಟಿ-20ಯಲ್ಲಿ ಕೇಳಬೇಕೆ. ಐಪಿಎಲ್`ನಲ್ಲಿ ಬರೋಬ್ಬರಿ 973 ರನ್ ಸಿಡಿಸಿದ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಗೇಲ್ ಗಳಿಸಿದ್ದ 733 ರನ್ ಆವರೆಗಿನ ದಾಖಲೆಯಾಗಿತ್ತು. ಜೊತೆಗೆ 4 ಅಮೋಘ ಶತಕಗಳನ್ನ ಸಿಡಿಸಿದ ಕೊಹ್ಲಿ ಒಂದೇ ಸೀಸನ್ನಿನಲ್ಲಿ 4 ಶತಕ ಸಿಡಿಸಿದ ಏಕೈಕ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು.

ಟೆಸ್ಟ್`ನಲ್ಲಿ ಸ್ಪೆಷಲ್ ಕೊಹ್ಲಿ: ಸೀಮಿತ ಓವರ್`ಗಳ ಪಂದ್ಯಗಳಷ್ಟೇ ಅಲ್ಲ. ಟೆಸ್ಟ್ ಕ್ರಿಕೆಟ್`ನಲ್ಲೂ ಕೊಹ್ಲಿ ರನ್ ದಾಹ ಮುಂದುವರೆದಿತ್ತು. 3 ತಿಂಗಳಲ್ಲಿ 2 ದ್ವಿಶತಕ(ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ) ಸಿಡಿಸದ ಕೊಹ್ಲಿ, ಈ ಸಾಧನೆ ಮಾಡಿದ ಮೊದಲ ಮತ್ತು ಏಕೈಕ ಭಾರತದ ನಾಯಕನೆಂಬ ಖ್ಯಾತಿಗೆ ಪಾತ್ರರಾದರು.