ರವಿಚಂದ್ರನ್ ಅಶ್ವಿನ್ ಬೌಲಿಂಗ್ ಹಾಗೂ ಆಲ್ರೌಂಡರ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ದುಬೈ(ಫೆ.27): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್'ನಲ್ಲಿ 333 ಅಂತರದ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಿರಾಟ್ ಕೊಹ್ಲಿ ಪುಣೆ ಟೆಸ್ಟ್'ನಲ್ಲಿ ವೈಫಲ್ಯ ಅನುಭವಿಸಿದರೂ ಎರಡನೇ ಶ್ರೇಯಾಂಕದಲ್ಲೇ ಮುಂದುವರೆದಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ ಬೌಲಿಂಗ್ ಹಾಗೂ ಆಲ್ರೌಂಡರ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಇನ್ನು ಪುಣೆ ಟೆಸ್ಟ್'ನಲ್ಲಿ ಅರ್ಧಶತಕ(64 ಮತ್ತು 10) ದಾಖಲಿಸಿದ ಕೆಎಲ್ ರಾಹುಲ್ ವೃತ್ತಜೀವನದ ಗರಿಷ್ಟ 46 ನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಸಫಲರಾಗಿದ್ದಾರೆ.

ಆಸೀಸ್ ನಾಯಕ ಎರಡನೇ ಇನಿಂಗ್ಸ್'ನಲ್ಲಿ ಭರ್ಜರಿ ಶತಕ ದಾಖಲಿಸುವುದರೊಂದಿಗೆ ಅಗ್ರ ಸ್ಥಾನವನ್ನು (939 ಅಂಕಗಳೊಂದಿಗೆ) ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಸ್ಮಿತ್ ಮೊದಲ ಇನಿಂಗ್ಸ್'ನಲ್ಲಿ 27 ಮತ್ತು ಎರಡನೇ ಇನಿಂಗ್ಸ್'ನಲ್ಲಿ 109 ಬಾರಿಸುವ ಮೂಲಕ ಆರು ಅಂಕ ಕಲೆಹಾಕಿದ್ದಾರೆ. ಈ ಮೂಲಕ ಕೊಹ್ಲಿಗಿಂತ ಸ್ಮಿತ್ 66 ಅಂಕಗಳೊಂದಿಗೆ ಮುನ್ನೆಡೆ ಸಾಧಿಸಿದ್ದಾರೆ.

ಆರ್ ಅಶ್ವಿನ್ ಮೊದಲ ಟೆಸ್ಟ್'ನಲ್ಲಿ 7 ವಿಕೆಟ್'ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದರೊಂದಿಗೆ 878 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಭದ್ರವಾಗಿ ನೆಲೆಯೂರಿದ್ದಾರೆ. ಇನ್ನು ಜೊತೆಯಾಟಗಾರ ರವೀಂದ್ರ ಜಡೇಜಾ 860 ಅಂಕಗಳೊಂದಿಗೆ ಆಸೀಸ್ ವೇಗಿ ಜೋಸ್ ಹ್ಯಾಜಲ್'ವುಡ್ ಜತೆಗೆ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.