ಐಪಿಎಲ್ ಹರಾಜು: ಕನ್ನಡದ ವೇಗಿಗಳಿಗಿಲ್ಲ ಕಿಮ್ಮತ್ತು..!
ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯದ ವೇಗಿಗಳಿಗೆ ಈಗಲೂ ಐಪಿಎಲ್‌ನಲ್ಲಿ ಬೇಡಿಕೆ ಇದೆ. ಉದಾಹರಣೆಗೆ ವೇಗಿ ಇಶಾಂತ್ ಶರ್ಮಾ, ಉನಾದ್ಕತ್ ಮತ್ತು ಮೋಹಿತ್ ಶರ್ಮಾ ಅವರಂತಹ ವೇಗಿಗಳು ಐಪಿಎಲ್‌ನಲ್ಲಿ ಬಿಕರಿಯಾದರು.
ಬೆಂಗಳೂರು[ಡಿ.20]: 12ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಹಲವು ಅಚ್ಚರಿಗೆ ಕಾರಣವಾಗಿದೆ. ಯುವ ಆಟಗಾರರು ಕೋಟಿ ಬಾಚುವ ಮೂಲಕ ಹಿರಿಯ ಆಟಗಾರರನ್ನು ಮೀರಿಸಿದ್ದಾರೆ. ಇದರ ಮಧ್ಯೆ ಕರ್ನಾಟಕದ 13 ಆಟಗಾರರು ಹರಾಜಿನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮಾತ್ರ ಆರ್'ಸಿಬಿ ಪಾಲಾದರು.
ಆರ್‌ಸಿಬಿ ಸೇರಿಕೊಂಡ ಸಂತಸ-ಶಿಮ್ರೊನ್ ಹೆಟ್ಮೆರ್ ವೀಡಿಯೋ ವೈರಲ್!
ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯದ ವೇಗಿಗಳಿಗೆ ಈಗಲೂ ಐಪಿಎಲ್‌ನಲ್ಲಿ ಬೇಡಿಕೆ ಇದೆ. ಉದಾಹರಣೆಗೆ ವೇಗಿ ಇಶಾಂತ್ ಶರ್ಮಾ, ಉನಾದ್ಕತ್ ಮತ್ತು ಮೋಹಿತ್ ಶರ್ಮಾ ಅವರಂತಹ ವೇಗಿಗಳು ಐಪಿಎಲ್‌ನಲ್ಲಿ ಬಿಕರಿಯಾದರು. ಆದರೆ ಕರ್ನಾಟಕದ ವೇಗಿಗಳಾದ ವಿನಯ್ ಕುಮಾರ್, ಮಿಥುನ್ ಮತ್ತು ರೋನಿತ್ ಮೋರೆಯವನ್ನು ಕೇಳುವವರೆ ಇಲ್ಲದಂತಾಗಿತ್ತು.
Exclusive ಸಂದರ್ಶನ: RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್!
ಆರ್ಕಿಟೆಕ್ಟ್ ವರುಣ್: ₹ 8.4 ಕೋಟಿಗೆ ಪಂಜಾಬ್ ಸೇರಿದ ತಮಿಳುನಾಡು ಮೂಲದ ಸ್ಪಿನ್ನರ್ ವರುಣ್ ಚಕ್ರವರ್ತಿ, 13ನೇ ವಯಸ್ಸಿಗೆ ಕ್ರಿಕೆಟ್ ಆಡಲು ಶುರುಮಾಡಿದ್ದರು. 17ನೇ ವಯಸ್ಸಿಗೆ ಕ್ರಿಕೆಟ್ ತೊರೆದು ಆರ್ಕಿಟೆಕ್ಟ್ ಪದವಿ ಪಡೆದು ವೃತ್ತಿ ಆರಂಭಿಸಿದ್ದರು. ಮತ್ತೆ ಕ್ರಿಕೆಟ್‌ಗೆ ಮರಳಿ ಟಿಎನ್‌ಪಿಎಲ್, ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಗಮನಸೆಳೆದಿದ್ದರು.
ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!
ದ್ರಾವಿಡ್ ಗುರುತಿಸಿದ ಪ್ರತಿಭೆ ಪ್ರಭ್: ₹ 4.8 ಕೋಟಿಗೆ ಪಂಜಾಬ್ ತಂಡದ ಪಾಲಾಗಿರುವ ಪ್ರಭ್ ಸಿಮ್ರನ್ ಸಿಂಗ್, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಗುರುತಿಸಿದ ಪ್ರತಿಭೆಯಾಗಿದ್ದಾರೆ. ಇನ್ನೂ ₹ 5 ಕೋಟಿಗೆ ಆರ್‌ಸಿಬಿ ಸೇರಿರುವ ಶಿವಂ ದುಬೆ, ಒಮ್ಮೆ ಟೆನಿಸ್ ಬಾಲ್ ಕ್ರಿಕೆಟ್ ಆಡುವಾಗ, ಅವರ ತಂದೆಗೆ ಸ್ಥಳೀಯ ವ್ಯಕ್ತಿಯೊಬ್ಬರು ನಿಮ್ಮ ಮಗ ಟೆನಿಸ್ ಬಾಲ್‌ಗಳನ್ನು ಕಳೆದು ಹಾಕುತ್ತಾರೆ ಎಂದಿದ್ದರಂತೆ. ಈ ಆಟಗಾರ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆದು ಅಚ್ಚರಿ ಮೂಡಿಸಿದರು.