ಜಗತ್ತಿನ ಅತಿ ಶ್ರೀಮಂತ ನೂರು ಕ್ರೀಡಾಪಟುಗಳ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ಪಟ್ಟಿಯಲ್ಲಿ ಫುಟ್ಬಾಲ್ ಆಟಗಾರರೇ ಪ್ರಾಬಲ್ಯ ಮೆರೆದಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ನವದೆಹಲಿ[ಜೂ.13]: ಕ್ರಿಕೆಟ್‌ ಜಗತ್ತಿನ ಪೋಸ್ಟರ್‌ ಬಾಯ್‌ ವಿರಾಟ್‌ ಕೊಹ್ಲಿ ವಿಶ್ವದ ಅಗ್ರ 100 ಶ್ರೀಮಂತ ಕ್ರೀಡಾಪಟುಗಳ ಸಾಲಿನಲ್ಲಿ ಸತತ 2ನೇ ವರ್ಷ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ 2019ರ ಸಾಲಿನ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ ಪ್ರಕಟಗೊಳಿಸಿದ್ದು, ಕೊಹ್ಲಿ 100ನೇ ಸ್ಥಾನದಲ್ಲಿದ್ದಾರೆ. ಅಗ್ರ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ, ಕ್ರಿಕೆಟಿಗ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಕಳೆದ ವರ್ಷದಲ್ಲಿ ವಿರಾಟ್‌ ಒಟ್ಟು 25 ಮಿಲಿಯನ್‌ ಡಾಲರ್‌ (ಅಂದಾಜು .173.3 ಕೋಟಿ) ಸಂಪಾದನೆ ಮಾಡಿದ್ದಾರೆ. ಇದರಲ್ಲಿ .145.5 ಕೋಟಿ ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದಿಂದ ಬಂದರೆ, ಇನ್ನುಳಿದ .27.72 ಕೋಟಿ ಸಂಭಾವನೆ ರೂಪದಲ್ಲಿ ದೊರೆತಿದೆ.

2018ರ ಪಟ್ಟಿಯಲ್ಲಿ ಕೊಹ್ಲಿ 83ನೇ ಸ್ಥಾನದಲ್ಲಿದ್ದರು. ಈ ವರ್ಷ ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದ ಮೂಲಕ ಸುಮಾರು .7 ಕೋಟಿ ಅಧಿಕ ಸಂಪಾದಿಸಿದರೂ, 17 ಸ್ಥಾನಗಳ ಇಳಿಕೆ ಕಂಡಿದ್ದಾರೆ.

ರೊನಾಲ್ಡೋಗೆ 2ನೇ ಸ್ಥಾನ, ಮೆಸ್ಸಿ ಶ್ರೀಮಂತ ಕ್ರೀಡಾಪಟು!

ಅರ್ಜೆಂಟೀನಾ, ಬಾರ್ಸಿಲೋನಾದ ತಾರಾ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ ವಿಶ್ವದ ಶ್ರೀಮಂತ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಪೋರ್ಚುಗಲ್‌, ಯುವೆಂಟುಸ್‌ನ ಫುಟ್ಬಾಲ್‌ ತಾರೆ ಕ್ರಿಸ್ಟಿಯಾಯೋ ರೊನಾಲ್ಡೋರನ್ನು ಮೆಸ್ಸಿ ಹಿಂದಿಕ್ಕಿದ್ದಾರೆ. ಕಳೆದ 12 ತಿಂಗಳಲ್ಲಿ ಮೆಸ್ಸಿಯ ಒಟ್ಟು ಗಳಿಕೆ 127 ಮಿಲಿಯನ್‌ ಡಾಲರ್‌ (ಅಂದಾಜು 880.44 ಕೋಟಿ ರುಪಾಯಿ) ಆಗಿದೆ. ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದ ಮೂಲಕ 637.80 ಕೋಟಿ ರುಪಾಯಿ ಸಂಪಾದಿಸುವ ಮೆಸ್ಸಿ, ಸಂಭಾವನೆ ರೂಪದಲ್ಲಿ 242.64 ಕೋಟಿ ರುಪಾಯಿ ಪಡೆಯುತ್ತಾರೆ.

ಅಗ್ರ 5 ಶ್ರೀಮಂತ ಕ್ರೀಡಾಪಟುಗಳು

ಕ್ರೀಡಾಪಟು  ಕ್ರೀಡೆದೇಶಗಳಿಕೆ (ಕಳೆದ 12 ತಿಂಗಳಲ್ಲಿ)
ಲಿಯೋನೆಲ್‌ ಮೆಸ್ಸಿ ಫುಟ್ಬಾಲ್‌ಅರ್ಜೆಂಟೀನಾ880.44 ಕೋಟಿ ರುಪಾಯಿಗಳು
ಕ್ರಿಸ್ಟಿಯಾನೋ ರೊನಾಲ್ಡೋಫುಟ್ಬಾಲ್‌ಪೋರ್ಚುಗಲ್‌755.64 ಕೋಟಿ ರುಪಾಯಿಗಳು
ನೇಯ್ಮಾರ್‌ ಫುಟ್ಬಾಲ್‌ಬ್ರೆಜಿಲ್‌727.91 ಕೋಟಿ ರುಪಾಯಿಗಳು
ಕಾನೆಲೋ ಆಲ್ವಾರೆಜ್‌ಬಾಕ್ಸಿಂಗ್‌ ಮೆಕ್ಸಿಕೋ651.65 ಕೋಟಿ ರುಪಾಯಿಗಳು
ರೋಜರ್‌ ಫೆಡರರ್‌  ಟೆನಿಸ್‌ಸ್ವಿಜರ್‌ಲೆಂಡ್‌647.77 ಕೋಟಿ ರುಪಾಯಿಗಳು

ಗಳಿಕೆ (ಕಳೆದ 12 ತಿಂಗಳಲ್ಲಿ)

880.44 ಕೋಟಿ

ಫುಟ್ಬಾಲ್‌ .755.64 ಕೋಟಿ

ಫುಟ್ಬಾಲ್‌ .727.91 ಕೋಟಿ

.651.65 ಕೋಟಿ

.647.77 ಕೋಟಿ