ಜಮೈಕಾ[ಆ.30]: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿಯಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.

ಒಂದು ಗೆಲುವು: 3 ಅಪರೂಪದ ರೆಕಾರ್ಡ್, ಕಿಂಗ್ ಕೊಹ್ಲಿ ಕಿರೀಟಕ್ಕೆ ಮತ್ತಷ್ಟು ಗರಿ..!

ಹೌದು, ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕರಾಗಿ ಎಂ.ಎಸ್. ಧೋನಿ ಅತಿ ಹೆಚ್ಚು ಗೆಲುವುಗಳ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ ಒಂದು ಜಯದ ಅವಶ್ಯಕತೆಯಿದೆ. ಈ ಮೂಲಕ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಪಟ್ಟವನ್ನು ಅಲಂಕರಿಸಲಿದ್ದಾರೆ. 

ಸೇನಾ ಸೇವೆ ಬಳಿಕ ಹೊಸ ಅವತಾರದಲ್ಲಿ ಧೋನಿ!

ಧೋನಿ ನಾಯಕತ್ವದಲ್ಲಿ ಭಾರತ 27 ಟೆಸ್ಟ್ ಪಂದ್ಯಗಳನ್ನು ಜಯಿಸಿತ್ತು. 47 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ 27 ಟೆಸ್ಟ್ ಜಯ ಸಾಧಿಸಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಧೋನಿ 60 ಪಂದ್ಯಗಳಲ್ಲಿ 27ರಲ್ಲಿ ಜಯಿಸಿದ್ದರು. ವಿಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕೊಹ್ಲಿ, ವಿದೇಶಿ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಜಯ ಪಡೆದ ನಾಯಕ ಎನಿಸಿಕೊಂಡಿದ್ದಾರೆ. ಮಾಜಿ ನಾಯಕ ಸೌರವ್ ಗಂಗೂಲಿ (11 ಟೆಸ್ಟ್ ಜಯ) ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಕೊಹ್ಲಿ ವಿದೇಶಿ ನೆಲದಲ್ಲಿ 26 ಪಂದ್ಯಗಳ ಪೈಕಿ 12ರಲ್ಲಿ ಜಯ ಸಾಧಿಸಿದ್ದಾರೆ.