ಮುಂಬೈ(ಸೆ.21): ಟೀಮ್ ಇಂಡಿಯಾದ ಐತಿಹಾಸಿಕ 500ನೇ ಟೆಸ್ಟ್ ನಾಳೆಯಿಂದ ಆರಂಭವಾಗಲಿದೆ. ಇದಕ್ಕೆ ಕಾನ್ಪುರ ಕ್ರೀಡಾಂಗಣ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಇನ್ನು ಈ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡಕ್ಕೆ ಭಾರತ ಸವಾಲ್ ಹಾಕಲಿದೆ.
ಭಾರತೀಯ ಕ್ರಿಕೆಟ್ ಲೋಕಕ್ಕೆ ಇದೊಂದು ಮೈಲಿಗಲ್ಲಾಗಿರೋದ್ರಿಂದ ಇದನ್ನು ಸ್ಮರಣೀಯವಾಗಿಸೋದು ಎಲ್ಲರ ಕನಸಾಗಿದೆ. ಈ ಕನಸನ್ನು ಸಾಕರಗೊಳಿಸುವ ಜವಬ್ದಾರಿ ಮಾತ್ರ ವಿರಾಟ್ ಕೊಹ್ಲಿ ಮೇಲಿದೆ. ಹೌದು, ಟೀಮ್ ಇಂಡಿಯಾವನ್ನು ಮುನ್ನಡೆಸಲಿರೋ ಕೊಹ್ಲಿ ಈ ಐತಿಹಾಸಿಕ ಪಂದ್ಯವನ್ನು ಗೆಲ್ಲಿಸಿಕೊಡಬೇಕಾದ ಒತ್ತಡದಲ್ಲಿದ್ದಾರೆ.
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಭಾರತದ ಪ್ರಮುಖ ಬ್ಯಾಟಿಂಗ್ ಬಲ ಅವರೇ ಆಗಿದ್ದಾರೆ. ಕೊಹ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಮೂಲ್ಕ ವಿರಾಟ್ ರೂಪ ತೋರುವುದರಲ್ಲಿ ಅನುಮಾನವೇ ಇಲ್ಲ.
ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೆಲವೇ ಪಂದ್ಯಗಳನ್ನು ಆಡಿದರು ಭರ್ಜರಿ ಸರಾಸರಿ ಹೊಂದಿದ್ದಾರೆ. ಉಳಿದೆಲ್ಲಾ ತಂಡಗಳಿಗಿಂತಲೂ ಗರಿಷ್ಠ ಸರಾಸರಿಯಲ್ಲಿ ಕಿವೀಸ್ ವಿರುದ್ಧ ಬ್ಯಾಟ್ ಬೀಸಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾ ನಂತರ ಹೆಚ್ಚು ಶತಕ ಸಿಡಿಸಿರೋದು ಕೂಡ ಕಿವೀಸ್ ಮೇಲೆಯೇ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಭಾರತದ ಟ್ರಂಪ್ ಕಾರ್ಡ್ ವಿರಾಟ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಅನುಷ್ಕಾ ಬರ್ತಾರೆ !
ವಿರಾಟ್ ಈ ಟೆಸ್ಟ್ ಮತ್ತೋಷ್ಟು ವಿಶೇಷವಾಗಲಿದೆ. ಯಾಕೆ ಅಂದ್ರೆ, ಈ ಐತಿಹಾಸಿಕ ಪಂದ್ಯವನ್ನು ನೋಡಲಿಕ್ಕೆ ಹಾಗೂ ಕೊಹ್ಲಿಯನ್ನು ಚೀಯರ್ ಮಾಡಲಿಕ್ಕೆ ಪ್ರೇಯಸಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬರ್ತಾರೆ ಅನ್ನೋ ಸುದ್ದಿಗಳು ಕೇಳಿ ಬರ್ತಿವೆ.
ಒಂದು ವೇಳೆ ಅನುಷ್ಕಾ ಈ ಟೆಸ್ಟ್ಗೆ ಬಂದ್ರೆ, ವಿರಾಟ್ ಅಬ್ಬರಿಸುವ ಅನಿವಾರ್ಯಕ್ಕೆ ಬಿಳ್ತಾರೆ. ವಿರಾಟ್ ಅಭಿಮಾನಿಗಳ ಕೆಂಗಣ್ಣಿಗೆ ಅನುಷ್ಕಾ ಗುರಿಯಾಗಿರೋದು ಎಲ್ಲರಿಗೂ ಗೊತ್ತಿದೆ. ಮೈದಾನದಲ್ಲಿ ಅನುಷ್ಕಾ ಕಾಣಿಸಿದ್ರೆ, ವಿರಾಟ್ ಠುಸ್ ಪಟಾಕಿ ಅನ್ನೋದು ಅಭಿಮಾನಿಗಳ ಮಾತಾಗಿದೆ. ಇದನ್ನು ಸುಳ್ಳು ಮಾಡಲಿಕ್ಕೆ ಕೊಹ್ಲಿ ಅಬ್ಬರಿಸುವ ಅನಿವಾರ್ಯಕ್ಕೆ ಬಿಳ್ತಾರೆ.
ಈ ಎಲ್ಲಾ ಕಾರಣಗಳಿಂದ ವಿರಾಟ್ ಮೇಲೆ ಸಾಕಷ್ಟು ಒತ್ತಡವಿದೆ. ಈ ಒತ್ತಡದಲ್ಲಿಯೂ ಕೊಹ್ಲಿ ಭಾರತದ ಟ್ರಂಪ್ ಕಾರ್ಡ್ ಆಗಿದ್ದಾರೆ ಅನ್ನೋದನ್ನ ಕಿವೀಸ್ ಮೇಲಿನ ಅಂಕಿ ಅಂಶ ಹಾಗೂ ಅವರ ಫಾರ್ಮ್ ಹೇಳ್ತಿದೆ.
