ಈ ಪ್ರಶಸ್ತಿಯನ್ನು ಆಯ್ಕೆ ಮಾಡಲು ಕ್ರಿಕೆಟ್ ದಿಗ್ಗಜರು, ಇಎಸ್'ಪಿಯನ್ ಹಿರಿಯ ಸಂಪಾದಕರು, ಪ್ರಮುಖ ಅಂಪೈರ್'ಗಳನ್ನೊಳಗೊಂಡ ತಂಡ ಆಯ್ಕೆಮಾಡುತ್ತದೆ.
ನವದೆಹಲಿ(ಫೆ.27): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಎಸ್'ಪಿಎನ್ ಕ್ರಿಕ್'ಇನ್ಫೊ ತನ್ನ 10 ವಾರ್ಷಿಕೋತ್ಸವದಲ್ಲಿ ವರ್ಷದ ಟೆಸ್ಟ್ ನಾಯಕ ಪ್ರಶಸ್ತಿ ಭಾಜನರಾಗಿದ್ದಾರೆ.
ಕಳೆದ ವರ್ಷ ವಿರಾಟ್ ಕೊಹ್ಲಿ 12 ಟೆಸ್ಟ್ ಪಂದ್ಯಗಳಲ್ಲಿ ಯಾವುದೇ ಸೋಲಿಲ್ಲದೆ 9 ಪಂದ್ಯದಲ್ಲಿ ಟೀಂ ಇಂಡಿಯಾ ಜಯದ ನಗೆ ಬೀರಿತ್ತು. ಈ ಪ್ರಶಸ್ತಿಯ ಮೂಲಕ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.
ಇನ್ನು ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್'ನಲ್ಲಿ 198 ಎಸೆತಗಳಲ್ಲಿ 258 ರನ್ ಸಿಡಿಸಿದ್ದರಿಂದ ಟೆಸ್ಟ್ ಬ್ಯಾಟಿಂಗ್ ಫರ್ಪಾಮೆನ್ಸ್ ಆಫ್ ದ ಇಯರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅದೇ ರೀತಿ ಸ್ಟೋಕ್ಸ್ ಸಹ ಆಟಗಾರ ಸ್ಟುವರ್ಟ್ ಬ್ರಾಡ್ ಎರಡನೇ ಬಾರಿಗೆ ಟೆಸ್ಟ್ ಬೌಲಿಂಗ್ ಫರ್ಪಾಮೆನ್ಸ್ ಆಫ್ ಇಯರ್ ಪ್ರಶಸ್ತಿ ಪಡೆಯುವಲ್ಲಿ ಸಫಲರಾಗಿದ್ದಾರೆ.
ಈ ಪ್ರಶಸ್ತಿಯನ್ನು ಆಯ್ಕೆ ಮಾಡಲು ಕ್ರಿಕೆಟ್ ದಿಗ್ಗಜರು, ಇಎಸ್'ಪಿಯನ್ ಹಿರಿಯ ಸಂಪಾದಕರು, ಪ್ರಮುಖ ಅಂಪೈರ್'ಗಳನ್ನೊಳಗೊಂಡ ತಂಡ ಆಯ್ಕೆಮಾಡುತ್ತದೆ. ಅಂತಹ ಆಯ್ಕೆ ಸಮಿತಿಯ ಪ್ರಮುಖರೆಂದರೆ:
ಇಯಾನ್ ಚಾಪೆಲ್, ಮಹೇಲಾ ಜಯವರ್ಧನೆ, ರಮೀಜ್ ರಾಜಾ, ಇಶಾ ಗುಹಾ, ಸಂಬಿತ್ ಬಾಲ್, ಕರ್ಟ್ನಿ ವಾಲ್ಸ್, ಮಾರ್ಕ್ ಬೌಚರ್ ಹಾಗೂ ಸೈಮನ್ ಟಫಲ್.
ಏಕದಿನ ವಿಭಾಗದಲ್ಲಿ:
ಬ್ಯಾಟಿಂಗ್ ಆಫ್ ದ ಇಯರ್ : ಕ್ವಿಂಟನ್ ಡಿ'ಕಾಕ್(SA)
ಬೌಲಿಂಗ್ ಆಫ್ ದ ಇಯರ್ : ಸುನಿಲ್ ನರೈನ್(WI)
ಟಿ20 ವಿಭಾಗ:
ಬ್ಯಾಟಿಂಗ್ ಆಫ್ ದ ಇಯರ್ : ಕಾರ್ಲೋಸ್ ಬ್ರಾಥ್'ವೈಟ್(WI)
ಬೌಲಿಂಗ್ ಆಫ್ ದ ಇಯರ್ : ಮುಸ್ತಫಿಜುರ್ ರೆಹಮಾನ್(BAN)
ಉದಯೋನ್ಮುಖ ಕ್ರಿಕೆಟಿಗ : ಮೆಹದಿ ಹಸನ್ ಮಿರಾಜ್ (BAN)
