ನವದೆಹಲಿ(ಸೆ.20): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಮೀರಾ ಬಾಯಿ ಚಾನುಗೆ ಖೇಲ್ ರತ್ನ ನೀಡಲು ಕೇಂದ್ರ ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. 

ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಆರ್ಚರಿ ಕೋಚ್ ಜೀವನ್‌ಜೋತ್ ತೇಜಾ ಒಬ್ಬರನ್ನು ಬಿಟ್ಟು, ಆಯ್ಕೆ ಸಮಿತಿ ಖೇಲ್ ರತ್ನ, ಅರ್ಜುನ ಹಾಗೂ ಧ್ಯಾನ್‌ಚಂದ್ ಪ್ರಶಸ್ತಿ ಗೆ ಶಿಫಾರಸು ಮಾಡಿದ್ದ ಎಲ್ಲರಿಗೂ ಪ್ರಶಸ್ತಿ ನೀಡಲು ಒಪ್ಪಿಗೆ ಸಿಕ್ಕಿದೆ. 

2015ರ ವಿಶ್ವ ಯುನಿವರ್ಸಿಟಿ ಗೇಮ್ಸ್ ವೇಳೆ ಅಸಭ್ಯ ವರ್ತನೆ ತೋರಿ ನಿಷೇಧಕ್ಕೆ ಗುರಿಯಾಗಿದ್ದರು ಎನ್ನುವ ಕಾರಣಕ್ಕೆ ತೇಜಾಗೆ ಪ್ರಶಸ್ತಿ ನೀಡದಿರಲು ಸಚಿವಾಲಯ ನಿರ್ಧರಿಸಿದೆ. ಸೆ.25ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.