'ಯೆಸ್ ಟು ಕ್ರಿಕೆಟ್ ಆ್ಯಂಡ್ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯಕ್ಕೆ ವಿರಾಟ್ ಕೊಹ್ಲಿ ಚಾಲನೆ ನೀಡಿದರು.

ತಿರುವನಂತಪುರಂ(ನ.06): ಡ್ರಗ್ಸ್ ವಿರೋಧಿ ಅಭಿಯಾನಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬೆಂಬಲ ಸೂಚಿಸಿದ್ದಾರೆ. 'ಯೆಸ್ ಟು ಕ್ರಿಕೆಟ್ ಆ್ಯಂಡ್ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯಕ್ಕೆ ಚಾಲನೆ ನೀಡಿದರು.

ಶಾಲಾ ಮಕ್ಕಳು, ಯುವಕರು ಡ್ರಗ್ಸ್, ಮಾದಕವಸ್ತುಗಳಿಂದ ಉಂಟಾಗುವ ಅಪಾಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹಾಗೂ ಇವುಗಳಿಂದ ದೂರವಿರಿ ಎಂದಿದ್ದಾರೆ.

ಇಲ್ಲಿನ ಚಂದ್ರಶೇಖರನ್ ನಾಯರ್ ಕ್ರೀಡಾಂಗಣದಲ್ಲಿ ನಡೆದ ಅಭಿಯಾನದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್ ಹಾಗೂ ಅಕ್ಷರ್ ಪಟೇಲ್ ಜತೆಗೂಡಿ ವಿರಾಟ್ ಕೊಹ್ಲಿ ಸಾವಿರಾರು ಮಕ್ಕಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಇದೇವೇಳೆ ವಿಶೇಷ ಪೋಸ್ಟಲ್ ಕವರ್ ಬಿಡುಗಡೆ ಮಾಡಲಾಯಿತು.