‘‘ಇದೇ ಮೊದಲ ಬಾರಿಗೆ ನಾನು ವಿವಾದವನ್ನು ತಣ್ಣಗಾಗಿಸಲು ಬಯಸುತ್ತೇನೆ. ಸೋಲಿನ ಭೀತಿಯಲ್ಲಿ ಜೇಮ್ಸ್ ಹೇಳಿರಬಹುದಾದ ಮಾತನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’’- ವಿರಾಟ್ ಕೊಹ್ಲಿ

ಮುಂಬೈ(ಡಿ.12): ಇಂಗ್ಲೆಂಡ್ ತಂಡದ ಜೇಮ್ಸ್ ಆ್ಯಂಡರ್ಸನ್ ಮಾಡಿದ್ದ ಟೀಕೆಗೆ ಪರಿಪಕ್ವತೆಯ ಉತ್ತರ ನೀಡುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮಲ್ಲಿ ಹಿಂದಿದ್ದ ಆಕ್ರಮಣಕಾರಿ ಮನಸ್ಥಿತಿಯಿಂದ ಹೊರಬಂದಿರುವುದನ್ನು ಸಾಬೀತುಪಡಿಸಿದ್ದಾರೆ.

ಪಂದ್ಯದ ಭಾನುವಾರದ ದಿನದಾಟ ಮುಗಿದ ನಂತರ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್, ‘‘ಸ್ವದೇಶೀ ಪಿಚ್‌ಗಳಲ್ಲಿ ಕೊಹ್ಲಿ ಮಾಡುತ್ತಿರುವ ತಪ್ಪುಗಳು ಕಾಣದಾಗುತ್ತಿವೆ’’ ಎಂದಿದ್ದರು.

ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಕೊಹ್ಲಿ, ‘‘ಇದೇ ಮೊದಲ ಬಾರಿಗೆ ನಾನು ವಿವಾದವನ್ನು ತಣ್ಣಗಾಗಿಸಲು ಬಯಸುತ್ತೇನೆ. ಸೋಲಿನ ಭೀತಿಯಲ್ಲಿ ಜೇಮ್ಸ್ ಹೇಳಿರಬಹುದಾದ ಮಾತನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’’ ಎಂದರು.