Asianet Suvarna News Asianet Suvarna News

ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ-ಆದರೆ "ಗ್ರೇಟ್ ಅಲ್ವಂತೆ"!

ಸದ್ಯ ಕ್ರಿಕೆಟ್‌ ಜಗತ್ತಿನ ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ. ಆದರೆ ಕೊಹ್ಲಿ ಇನ್ನೂ ಗ್ರೇಟ್ ಪ್ಲೇಯರ್ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಸಚಿನ್ ತೆಂಡೂಲ್ಕರ್, ವಿವ್ ರಿಚರ್ಡ್ಸ್‌ರಂತಹ ದಿಗ್ಗಜ ಸಾಲಿನಲ್ಲಿ ಕಾಣಿಸಿಕೊಳ್ಳಲು ಕೊಹ್ಲಿ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.

Virat Kohli is a good player but not a great says Carl hooper
Author
Bengaluru, First Published Oct 13, 2018, 11:12 AM IST
  • Facebook
  • Twitter
  • Whatsapp

ಜಮೈಕಾ(ಅ.13): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಸಚಿನ್ ತೆಂಡೂಲ್ಕರ್, ವಿವಿಎನ್ ರಿಚರ್ಡ್ಸ್ ರಂತಹ  ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸಿದರೆ ಕೊಹ್ಲಿ ಶ್ರೇಷ್ಠ ಪ್ಲೇಯರ್ ಆಗಿಲ್ಲ ಎಂದು ವೆಸ್ಟ್ಇಂಡೀಸ್ ಮಾಜಿ ಕ್ರಿಕೆಟಿಗ ಕಾರ್ಲ್ ಹೂಪರ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಕಾಲದಲ್ಲಿ ಅತ್ಯಂತ ಶ್ರೇಷ್ಠ ಬೌಲರ್‌ಗಳಿದ್ದರು. ವಾಸಿಮ್ ಅಕ್ರಮ್, ವಕಾರ್ ಯೂನಿಸ್, ಕರ್ಟ್ಲೇ ಆಂಬ್ರೂಸ್, ಕರ್ಟ್ನೆ ವಾಲ್ಶ್ ಸೇರಿದಂತೆ ಘಟಾನುಘಟಿ ಬೌಲರ್‌ಗಳನ್ನ ಸಚಿನ್ ನಿರಾಯಾಸವಾಗಿ ಎದುರಿಸಿದ್ದಾರೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಹೀಗಾಗಿ ಅತ್ಯುತ್ತಮ ಆಟಗಾರನಾಗಿರುವ ಕೊಹ್ಲಿ, ಶ್ರೇಷ್ಠ ಆಟಗಾರನಾಗಬೇಕಿದೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ತುಂಬಾ ವಿಶೇಷ ಆಟಗಾರ. ಪರಿಶ್ರಮ, ಶ್ರದ್ಧೆ ಹಾಗೂ ಪ್ರತಿಭೆಯಿಂದ ಕೊಹ್ಲಿ ಸ್ಥಿರಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಹಾಗೂ ವಿಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್‌ಗೂ ತುಂಬಾ ವ್ಯತ್ಯಾಸವಿದೆ ಎಂದಿದ್ದಾರೆ. 

Follow Us:
Download App:
  • android
  • ios