ಲಂಡನ್(ಆ.09): ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ನೀಡೋದು, ಚಾಲೆಂಜ್ ಸ್ವೀಕರಿಸೋದು ಇದೀಗ ಜನಪ್ರಿಯವಾಗಿದೆ. ಇತ್ತೀಚೆಗಷ್ಟೇ ಕಿಕಿ ಚಾಲೆಂಜ್ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಚಾಲೆಂಜ್ ಹಾಕಿದ್ದಾರೆ.

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ವಿರಾಟ್ ಕೊಹ್ಲಿ ವೇಷಭೂಷ ಸವಾಲು ಹಾಕಿದ್ದಾರೆ.  ಸಾಂಪ್ರದಾಯಿಕ ಉಡುಗೆ ಧರಿಸಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ಮಾಡಿ ಎಂದು ಕೊಹ್ಲಿ ಚಾಲೆಂಜ್ ಮಾಡಿದ್ದಾರೆ.

 

 

ವಿರಾಟ್ ಕೊಹ್ಲಿ ವೇಷಭೂಷ ಚಾಲೆಂಜ್‌ನ್ನ ತಂಡದ ಸಹ ಆಟಗಾರರಾದ ಶಿಖರ್ ಧವನ್ ಹಾಗೂ ರಿಷಬ್ ಪಂತ್‌ಗೆ ಹಾಕಿದ್ದಾರೆ. ಸಂಪ್ರಾದಾಯಿಕ ಉಡುಗೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ವೇಷಭೂಷ ಚಾಲೆಂಜ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.