ಈ ವರ್ಷ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರು 6 ಪಂದ್ಯಗಳನ್ನಾಡಿದ್ದು 7.66ರ ಸರಾಸರಿಯಲ್ಲಿ ಕಲೆಹಾಕಿದ್ದು ಕೇವಲ 46 ರನ್ ಮಾತ್ರ..!

ಭಾರತ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದು 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಧೋನಿ, ಪಾಂಡ್ಯ ಆಕರ್ಷಕ ಅರ್ಧಶತಕ ಹಾಗೂ ಚಾಹಲ್, ಕುಲ್ದೀಪ್ ಚಾಣಾಕ್ಷ ಸ್ಪಿನ್ ನೆರವಿನಿಂದ ಮೊದಲ ಪಂದ್ಯವನ್ನು ವಿರಾಟ್ ಕೈವಶ ಮಾಡಿಕೊಂಡಿದೆ.

ಮೊದಲ ಪಂದ್ಯದಲ್ಲಿ ದಾಖಲಾದ ಬೇಕಾದ ಹಾಗೇ ಬೇಡವಾದ ದಾಖಲೆಗಳು:

* ವಿರಾಟ್ ಕೊಹ್ಲಿ ವೃತ್ತಿಪರ ಕ್ರಿಕೆಟ್'ನಲ್ಲಿ ಇದುವರೆಗೆ 27 ಬಾರಿ ಶೂನ್ಯ ಸುತ್ತಿದ್ದಾರೆ. ಅದರಲ್ಲಿ ನಾಥನ್ ಕೌಲ್ಟರ್'ನಿಲ್ ಮಾತ್ರ ಎರಡು ಬಾರಿ ವಿರಾಟ್ ಕೊಹ್ಲಿಯನ್ನು 2 ಬಾರಿ ಶೂನ್ಯಕ್ಕೆ ಔಟ್ ಮಾಡಿದ ಏಕೈಕ ಬೌಲರ್ ಎನಿಸಿದ್ದಾರೆ.(ಐಪಿಎಲ್ 2017& ನಿನ್ನೆಯ ಪಂದ್ಯ)

* ಎಂ.ಎಸ್. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ 100ನೇ ಅರ್ಧಶತಕ ದಾಖಲಿಸಿದರು. (ಟೆಸ್ಟ್-66, ಏಕದಿನ-33& ಟಿ20-01)

* ಕಾಕತಾಳಿಯ ಅಂದ್ರೆ: ಸಿಕ್ಸರ್ ಮೆಷೀನ್ ಆಗುವತ್ತ ಸಾಗುತ್ತಿರುವ ಹಾರ್ದಿಕ್ ಪಾಂಡ್ಯ 37ನೇ ಓವರ್ ಎಸೆದ ಆ್ಯಡಂ ಜಂಪಾ ಬೌಲಿಂಗ್'ನಲ್ಲಿ ಬಾರಿಸಿದ ರನ್ ಈ ರೀತಿಯಿದೆ 4,6,6,6. ಹಾಗೆಯೇ ಆಸೀಸ್ ಬ್ಯಾಟ್ಸ್'ಮನ್ ಮ್ಯಾಕ್ಸ್'ವೆಲ್, 11 ಓವರ್'ನ ಕುಲ್ದೀಪ್ ಯಾದವ್ ಬೌಲಿಂಗ್'ನಲ್ಲಿ ಬಾರಿಸಿದ ರನ್ ಕೂಡಾ 4,6,6,6 ಹೀಗೆಯೇ..

* ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ 10ನೇ ಏಕದಿನ ಪಂದ್ಯವನ್ನು ಗೆಲ್ಲುವುದರ ಮೂಲಕ ಎಂಎಸ್ ಧೋನಿ(09) ಹೆಸರಿನಲ್ಲಿದ್ದ ದಾಖಲೆ ಅಳಿಸಿಹೋಯ್ತು.

* ಮೊದಲ ಪಂದ್ಯದಲ್ಲಿ ಉಭಯ ತಂಡದ ನಾಯಕರು ಗಳಿಸಿದ ಒಟ್ಟು ಮೊತ್ತ ಕೇವಲ 1 ರನ್..! ಇದು ಇಂಡೋ-ಆಸೀಸ್ ನಾಯಕ ಇತಿಹಾಸದಲ್ಲಿ ದಾಖಲಾದ ಕಳಪೆ ಸಾಧನೆ.

* ಈ ವರ್ಷ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರು 6 ಪಂದ್ಯಗಳನ್ನಾಡಿದ್ದು 7.66ರ ಸರಾಸರಿಯಲ್ಲಿ ಕಲೆಹಾಕಿದ್ದು ಕೇವಲ 46 ರನ್ ಮಾತ್ರ..!