ಮುಂಬೈ(ಏ.19): ಟೀಂ ಇಂಡಿಯಾ ಕ್ಲಾಸ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೆ ಸದ್ಯ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ. ಇನ್ನು ಏಕದಿನ ಹಾಗೂ ಟಿ20 ತಂಡದಲ್ಲಿ ರಹಾನೆಯನ್ನು ಕಡೆಗಣಿಸಲಾಗಿದೆ. ಅದ್ಬುತ ಪ್ರದರ್ಶನ ನೀಡಿದರೂ ರಹಾನೆಗೆ ಅವಕಾಶ ಮಾತ್ರ ಸಿಗುತ್ತಿಲ್ಲ. ಇದೀಗ ಟೀಂ ಇಂಡಿಯಾದಲ್ಲಿ ಅವಕಾಶವಂಚಿತನಾಗಿರುವ ರಹಾನೆ ವಿದೇಶಿ ಕ್ರಿಕೆಟ್‌ನತ್ತ ಚಿತ್ತ ಹರಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ತಂಡದ ಆಯ್ಕೆ ಬಗ್ಗೆ ಕೋಚ್ ರವಿಶಾಸ್ತ್ರಿ ಅಚ್ಚರಿಯ ಹೇಳಿಕೆ..!

ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿರುವ ಅಜಿಂಕ್ಯ ರಹಾನೆ ಇದೀಗ ಕೌಂಟಿ ಕ್ರಿಕೆಟ್ ಆಡಲು ತಯಾರಿ ಮಾಡಿದ್ದಾರೆ. ಇಂಗ್ಲೆಂಡ್‌ನ ಹ್ಯಾಂಪ್‌ಶೈರ್ ಕೌಂಟಿ ತಂಡದ ಜೊತೆ ಮಾತುಕತೆ ನಡೆಸಿದ್ದಾರೆ. ಕೌಂಟಿ ಕ್ರಿಕೆಟ್ ಆಡಲು ರಹಾನೆ ಈಗಾಗಲೇ ಬಿಸಿಸಿಐ ಬಳಿ ಅನುಮತಿ ಕೋರಿದ್ದಾರೆ. ಬಿಸಿಸಿಐ  CEO ರಾಹುಲ್ ಜೊಹ್ರಿ ಹಾಗೂ ಕ್ರಿಕೆಡ್ ಆಡಳಿತ ಸಮಿತಿಗೆ ರಹಾನೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಸೋತರೂ ಜಾಲಿ ಮೂಡಲ್ಲಿ RCB ಹುಡುಗರು..!

2019ರ ವಿಶ್ವಕಪ್ ತಂಡಕ್ಕೂ ಅಜಿಂಕ್ಯ ರಹಾನೆ ಆಯ್ಕೆಯಾಗಿಲ್ಲ. ರಹಾನೆ ಕೊನೆಯ ಬಾರಿ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದು 2018ರ ಫೆಬ್ರವರಿಯಲ್ಲಿ. ಇನ್ನು ಟಿ20 ತಂಡದಲ್ಲಿ ಕಾಣಿಸಿಕೊಳ್ಳದೇ ಬರೋಬ್ಬರಿ 3 ವರ್ಷಗಳಾಗಿವೆ. ಟೆಸ್ಟ್ ತಂಡದಲ್ಲಿ ಉಪನಾಯಕನಾಗಿರುವ ರಹಾನೆ, ಸದ್ಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಪಿಎಲ್ ಬಳಿಕ ರಹಾನೆಗೆ ಯಾವುದೇ ಸರಣಿಗಳಿಲ್ಲ. ಹೀಗಾಗಿ ಕೌಂಟಿ ಕ್ರಿಕೆಟ್ ಆಡು ನಿರ್ಧರಿಸಿದ್ದಾರೆ.