‘ಈ ವಾರದ ಖಳನಾಯಕ ಯಾರು?’ ಅನ್ನುವ ಶೀರ್ಷಿಕೆಯಿರುವ ಈ ಪೋಸ್ಟ್‌ನಲ್ಲಿ ಪಾಂಡ, ನಾಯಿಮರಿ ಹಾಗೂ ಬೆಕ್ಕಿನ ಮರಿಯೊಂದಿಗೆ ಕೊಹ್ಲಿ ಚಿತ್ರ ಹಾಕಿ ಅವಹೇಳನ ಮಾಡಲಾಗಿದೆ.

ನವದೆಹಲಿ(ಮಾ.10): ಬೆಂಗಳೂರು ಟೆಸ್ಟ್‌'ನಲ್ಲಿನ ಡಿಆರ್‌'ಎಸ್ ವಿವಾದಕ್ಕೆ ಸಂಬಂಧಿಸಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳ ಟೀಕಾ ಪ್ರಹಾರ ಮುಂದುವರೆದಿದ್ದು, ಇಂದು ಫಾಕ್ಸ್ ನ್ಯೂಸ್ ಆಸ್ಟ್ರೇಲಿಯಾ ಪತ್ರಿಕೆಯೊಂದು ಅತಿರೇಕದ ಅವಿವೇಕತನ ಪ್ರದರ್ಶಿಸಿದೆ.

ತನ್ನ ಫೇಸ್‌'ಬುಕ್ ಪೇಜ್‌'ನಲ್ಲಿ ಕೊಹ್ಲಿಯನ್ನು ಪ್ರಾಣಿಗಳ ಜತೆ ಹೋಲಿಸಿದ ಪೋಸ್ಟ್ ಒಂದನ್ನು ಹಾಕಿರುವುದು ವಿವಾದ ಎಬ್ಬಿಸಿದೆ. ‘ಈ ವಾರದ ಖಳನಾಯಕ ಯಾರು?’ ಅನ್ನುವ ಶೀರ್ಷಿಕೆಯಿರುವ ಈ ಪೋಸ್ಟ್‌ನಲ್ಲಿ ಪಾಂಡ, ನಾಯಿಮರಿ ಹಾಗೂ ಬೆಕ್ಕಿನ ಮರಿಯೊಂದಿಗೆ ಕೊಹ್ಲಿ ಚಿತ್ರ ಹಾಕಿ ಅವಹೇಳನ ಮಾಡಲಾಗಿದೆ.

ದಿನದ ಹಿಂದಷ್ಟೇ ಇದೇ ಪತ್ರಿಕೆ ಆಸಿಸ್ ಅಧಿಕಾರಿಗಳ ಮೇಲೆ ಖಾಲಿ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಕೊಹ್ಲಿ ಮತ್ತು ಕೋಚ್ ಕುಂಬ್ಳೆ ವಿರುದ್ಧ ಕಿಡಿ ಕಾರಿದ್ದವು.