ಕಳೆದೆರಡು ಪಂದ್ಯಗಳ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಆರ್’ಸಿಬಿ ಕೊನೆಗೂ 14 ರನ್’ಗಳ ಭರ್ಜರಿ ಜಯ ಸಾಧಿಸಿತು.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿದ್ದ ಆರ್’ಸಿಬಿ ಸಾಂಘಿಕ ಪ್ರದರ್ಶನ ತೋರುವ ಮೂಲಕ ಜಯಭೇರಿ ಬಾರಿಸಿತು. ಅದರಲ್ಲೂ ಈ ಪಂದ್ಯದ 19ನೇ ಓವರ್’ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಹಿಡಿಯುವಲ್ಲಿ ಕೊಹ್ಲಿ ಯಶಸ್ವಿಯಾದರು. ಈ ಕ್ಯಾಚ್ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳೂ ಸೇರಿದಂತೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಹೀಗಿತ್ತು ಆ ಅದ್ಭುತ ಕ್ಯಾಚ್: