ಜಾಂಟಿ ರೋಡ್ಸ್ ಮಗಳು 'ಇಂಡಿಯಾ ರೋಡ್ಸ್'ಗೆ ನಮ್ಮ ಭಾರತೀಯ ಆಟಗಾರರನ್ನು ಕಂಡರೆ ಹುಚ್ಚು

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ ಅವರ ಮಗಳು ಇಂಡಿಯಾ ರೋಡ್ಸ್‌ ಕೂಡ ವಿರಾಟ್‌ ಕೊಹ್ಲಿ ಅಭಿಮಾನಿಯಂತೆ. ಈ ಬಗ್ಗೆ ಸ್ವತಃ ರೋಡ್ಸ್‌ ತಮ್ಮ ಟ್ವಿಟರ್‌ನಲ್ಲಿ ಫೋಟೋವನ್ನು ಹಾಕುವ ಮೂಲಕ ತಿಳಿಸಿದ್ದಾರೆ. ‘‘ಕೊಹ್ಲಿಗೆ ಮತ್ತೊಬ್ಬಳು ಅಭಿಮಾನಿ ಹುಟ್ಟಿಕೊಂಡಿದ್ದಾಳೆ. ನನ್ನ ಮಗಳ ಆಯ್ಕೆ ಸರಿಯಾಗೇ ಇದೆ'' ಎಂದು ರೋಡ್ಸ್‌ ಬರೆದಿದ್ದಾರೆ. ತಮ್ಮ ಮಗಳಿಗೆ ‘ಇಂಡಿಯಾ' ಎಂದು ಹೆಸರಿಟ್ಟು ಜಾಂಟಿ ರೋಡ್ಸ್‌ ಭಾರೀ ಸುದ್ದಿಯಾಗಿದ್ದರು.