ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

Virat Kohli fastest to 2000 T20I runs
Highlights

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನಾಯಕ ವಿರಾಟ್ ಕೊಹ್ಲಿ ಶುಭಾರಂಭದ ಸಂಭ್ರಮದಲ್ಲಿದ್ದಾರೆ. ಇದರ ಜೊತೆಗೆ ಕೊಹ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಕೊಹ್ಲಿ ಬರೆದ ನೂತನ ದಾಖಲೆ ಯಾವುದು? ಇಲ್ಲಿದೆ ವಿವರ

ಓಲ್ಡ್ ಟ್ರಾಫೋರ್ಡ್(ಜು.04): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತೀವೇಗದಲ್ಲಿ 2000 ರನ್ ಪೂರೈಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಓಲ್ಡ್ ಟ್ರಾಫ್ರೋರ್ಡ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 8 ರನ್‌ಗಳಿಸುತ್ತಿದ್ದಂತೆ, 2000 ಸಾವಿರ ರನ್ ಪೂರೈಸಿದರು. ಕೊಹ್ಲಿ 60 ಪಂದ್ಯಗಳ 56 ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದರು. 

 

 

ಅತೀ ವೇಗದಲ್ಲಿ 2000 ರನ್ ಪೂರೈಸಿದ ಕ್ರಿಕೆಟಿಗರ ಪೈಕಿ ಅಗ್ರಸ್ಥಾನ ಪಡೆದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 20 ರನ್ ಸಿಡಿಸೋ ಮೂಲಕ ತಂಡಗ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದರು. 

ಟಿ20 ಕ್ರಿಕೆಟ್‌ನ ಅತೀವೇಗದ 200ರನ್ ಸರದಾರರು:

ಬ್ಯಾಟ್ಸ್‌ಮನ್ ತಂಡ ಪಂದ್ಯ ಇನ್ನಿಂಗ್ಸ್
ವಿರಾಟ್ ಕೊಹ್ಲಿ ಭಾರತ 60 56
ಬ್ರೆಂಡೆನ್ ಮೆಕ್ಕಲಮ್ ನ್ಯೂಜಿಲೆಂಡ್ 71 66
ಮಾರ್ಟಿನ್ ಗುಪ್ಟಿಲ್ ನ್ಯೂಜಿಲೆಂಡ್ 75 68
ಶೋಯಿಬ್ ಮಲ್ಲಿಕ್ ಪಾಕಿಸ್ತಾನ 99 92


 

loader