ಟೆಸ್ಟ್ ಬ್ಯಾಟ್ಸ್'ಮನ್‌'ಗಳ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಮೊದಲ ಸ್ಥಾನ ಪಡೆದರೆ, ಕೊಹ್ಲಿ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ದುಬೈ(ಜ.01): ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವುದರೊಂದಿಗೆ 2017ಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ.
ಭಾನುವಾರ ಐಸಿಸಿ ಕಳೆದ ವರ್ಷದ ಅಂತಿಮ ಶ್ರೇಯಾಕ ಪಟ್ಟಿಯನ್ನು ಪ್ರಕಟಿಸಿತು.
ಇನ್ನು ಟೆಸ್ಟ್ ಬ್ಯಾಟ್ಸ್'ಮನ್'ಗಳ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಮೊದಲ ಸ್ಥಾನ ಪಡೆದರೆ, ಕೊಹ್ಲಿ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನ ಕಾಪಾಡಿಕೊಂಡಿದೆ.
ಇನ್ನು ಏಕದಿನ ತಂಡ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದರೆ, ಭಾರತ ಎರಡನೇ ಸ್ಥಾನದಲ್ಲಿದೆ
