ಕೆಲದಿನಗಳ ಹಿಂದಷ್ಟೆ ಪಾಕಿಸ್ತಾನದ ನಜರಾನ ಗಫರ್ ಎನ್ನುವ ಪತ್ರಕರ್ತ ವಿರಾಟ್ ಕೊಹ್ಲಿಯೊಬ್ಬರನ್ನು ನೀಡಿ, ನಿಮಗೆ ಇಡೀ ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ನೀಡುತ್ತೇವೆ ಎಂದು ಹೇಳಿ ಸುದ್ದಿಯಾಗಿದ್ದರು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನೇ ಹೋಲುವ ಯುವಕನ್ನೊಬ್ಬ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ನೋಡಲು ಪಕ್ಕಾ ವಿರಾಟ್ ಕೊಹ್ಲಿಯನ್ನೇ ಹೋಲುವ ಯುವಕನೊಬ್ಬ ಕರಾಚಿಯ ಶಹೀದ್ ಇ ಮಿಲತ್ ರಸ್ತೆಯಲ್ಲಿರುವ ಫಿಜ್ಜಾ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನು ಫಿಜ್ಜಾ ಮಾರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೆಲದಿನಗಳ ಹಿಂದಷ್ಟೆ ಪಾಕಿಸ್ತಾನದ ನಜರಾನ ಗಫರ್ ಎನ್ನುವ ಪತ್ರಕರ್ತ ವಿರಾಟ್ ಕೊಹ್ಲಿಯೊಬ್ಬರನ್ನು ನೀಡಿ, ನಿಮಗೆ ಇಡೀ ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ನೀಡುತ್ತೇವೆ ಎಂದು ಹೇಳಿ ಸುದ್ದಿಯಾಗಿದ್ದರು. ಇದೀಗ ಕೊಹ್ಲಿಯಂತೆ ಕಾಣುವ ಈ ಯುವಕ ಆರ್ಶದ್ ಖಾನ್'ನನ್ನು ನೀಡಿದರೆ ನೀವೂ ಒಂದು ಕ್ಷಣ ತಬ್ಬಿಬ್ಬಾಗೋದಂತೂ ಗ್ಯಾರಂಟಿ...!