ಆರ್'ಸಿಬಿಗೆ ರೋಚಕ ಗೆಲುವು :ಪ್ಲೇಆಫ್ ಹಾದಿ ಜೀವಂತ

RCB Won by 14 Runs
Highlights

ವಿರಾಟ್ ಪಡೆ ನೀಡಿದ 218 ರನ್'ಗಳ ಗುರಿನ್ನು ಬೆನ್ನತ್ತಿದ ಕೇನ್ ವಿಲಿಯಮ್ಸ್'ನ್  ಪಡೆ 3 ವಿಕೇಟ್ ನಷ್ಟಕ್ಕೆ 204 ರನ್ ಗಳಿಸಲಷ್ಟೆ ಸಾಧ್ಯವಾಯಿತು. ವಿಲಿಯಮ್ಸ್'ನ್ (81, 42 ಎಸೆತ, 5 ಸಿಕ್ಸ್, 7 ಬೌಂಡರಿ)  ಸ್ಫೋಟಕ ಆಟ ಹಾಗೂ ಮನೀಶ್ ಪಾಂಡೆ(38 ಎಸೆತ, 7 ಬೌಂಡರಿ, 2 ಸಿಕ್ಸ್) ಅವರ ರೋಚಕ ಆಟ ವ್ಯರ್ಥವಾಯಿತು. 

ಬೆಂಗಳೂರು(ಮೇ.17):  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್  ವಿರುದ್ಧ 14 ರನ್'ಗಳ ರೋಚಕ ಗೆಲುವು ಸಾಧಿಸಿದರು. 
ವಿರಾಟ್ ಪಡೆ ನೀಡಿದ 218 ರನ್'ಗಳ ಗುರಿನ್ನು ಬೆನ್ನತ್ತಿದ ಕೇನ್ ವಿಲಿಯಮ್ಸ್'ನ್  ಪಡೆ 3 ವಿಕೇಟ್ ನಷ್ಟಕ್ಕೆ 204 ರನ್ ಗಳಿಸಲಷ್ಟೆ ಸಾಧ್ಯವಾಯಿತು. ವಿಲಿಯಮ್ಸ್'ನ್ (81, 42 ಎಸೆತ, 5 ಸಿಕ್ಸ್, 7 ಬೌಂಡರಿ)  ಸ್ಫೋಟಕ ಆಟ ಹಾಗೂ ಮನೀಶ್ ಪಾಂಡೆ(38 ಎಸೆತ, 7 ಬೌಂಡರಿ, 2 ಸಿಕ್ಸ್) ಅವರ ರೋಚಕ ಆಟ ವ್ಯರ್ಥವಾಯಿತು. 
ಬೆಂಗಳೂರಿನ ಬೌಲರ್'ಗಳು ಹೆಚ್ಚು ವಿಕೇಟ್ ಪಡೆಯದಿದ್ದರೂ ಬೇಹತ್ ಗುರಿಯನ್ನು ಬಿಡಲಿಲ್ಲ. ಇದರೊಂದಿಗೆ ಪ್ಲೇಆಫ್ ಆಸೆ ಇನ್ನೂ ಜೀವಂತವಾಗಿದೆ. ಈ ಮೊದಲು ಟಾಸ್ ಗೆದ್ದ ಹೈದರಾಬಾದಿನ ನಾಯಕ ಕೇನ್ ವಿಲಿಯಮ್ಸ್'ನ್  ವಿರಾಟ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಮೊದಲ 5 ಓವರ್'ಗಳಾಗುವಷ್ಟರಲ್ಲಿ ನಾಯಕ ಕೊಹ್ಲಿ ಹಾಗೂ ಪಾರ್ಥೀವ್ ಪಟೇಲ್ ಇಬ್ಬರು ಪೆವಿಲಿಯನ್'ಗೆ ತೆರಳಿದರು.  
ಮೂರನೆ ವಿಕೇಟ್ ಜೊತೆಯಾಟದಲ್ಲಿ ಸ್ಫೋಟಕ ಆಟವಾಡಿದ ಮೋಹಿನ್ ಅಲಿ ಹಾಗೂ ಎಬಿಡಿ ವಿಲಿಯರ್ಸ್ ಜೋಡಿ 9.3 ಓವರ್'ಗಳಲ್ಲಿ 107 ರನ್ ಪೇರಿಸಿದರು. ಮೋಯಿನ್ 34 ಚಂಡುಗಳಲ್ಲಿ 6 ಸಿಕ್ಸ್'ರ್ 2 ಬೌಂಡರಿಯೊಂದಿಗೆ 69 ರನ್ ಬಾರಿಸಿದರೆ, ಎಬಿಡಿ 39 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್ ನೊಂದಿಗೆ 65 ಸ್ಫೋಟಿಸಿದರು.
ರಶೀದ್ ಖಾನ್'ಗೆ ಇಬ್ಬರು ಔಟಾದ ನಂತರ ಕೊನೆಯ 5 ಓವರ್'ಗಳಿರುವಾಗ ಆಗಮಿಸಿದ ಗ್ರಾಂಡ್'ಹೊಮೆ  17 ಚಂಡುಗಳಲ್ಲಿ 4 ಸಿಕ್ಸ್ , 1 ಬೌಂಡರಿಯೊಂದಿಗೆ  40 ರನ್ ಸಿಡಿಸಿದರು. ಅಂತಿಮವಾಗಿ ಬೆಂಗಳೂರು ತಂಡ 20 ಓವರ್'ಗಳಲ್ಲಿ 218  ರನ್ ಕಲೆ ಹಾಕಿತು. ಹೈದರಾಬಾದ್ ಪರ  ರಶೀದ್ ಖಾನ್  27/3, ಕೌಲ್ 44/2 ವಿಕೇಟ್ ಕಿತ್ತರು

ಸ್ಕೋರ್ 
ಆರ್'ಸಿಬಿ 20 ಓವರ್'ಗಳಲ್ಲಿ 218/6
(ಮೋಯಿನ್ 69, ಎಬಿಡಿ 65, ಗ್ರಾಂಡ್'ಹೊಮೆ 40)

ಸನ್ ರೈಸರ್ಸ್ ಹೈದರಾಬಾದ್ 20 ಓವರ್'ಗಳಲ್ಲಿ 204/3
(ಕೇನ್ 81, ಪಾಂಡೆ 62)

ಪಂದ್ಯ ಶ್ರೇಷ್ಠ : ಮೋಯಿನ್ ಅಲಿ 

 

loader