ನಾಯಕ ಪೃಥ್ವಿ ಶಾ ‘ಟೂರ್ನಿಗೂ ಮುನ್ನ ನಾವು ಕೆಲ ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ. ಅದು ನಮಗೆ ನೆರವಾಗಲಿದೆ. ವಿಶ್ವಕಪ್‌'ಗೂ ಮುನ್ನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ವಿಶ್ವಕಪ್ ಗೆಲ್ಲುವುದು ನಮ್ಮ ಗುರಿ’ ಎಂದರು.

ಮುಂಬೈ(ಡಿ.28): ಜ.13ರಿಂದ ಆರಂಭಗೊಳ್ಳಲಿರುವ ಅಂಡರ್-19 ವಿಶ್ವಕಪ್‌'ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಗುರುವಾರ ನ್ಯೂಜಿಲೆಂಡ್‌'ಗೆ ತೆರಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ‘ನ್ಯೂಜಿಲೆಂಡ್ ರೀತಿಯ ಪಿಚ್‌'ಗಳನ್ನು ನಿರ್ಮಿಸಿ ಅಭ್ಯಾಸ ನಡೆಸಿದ್ದೇವೆ. ಆದರೆ ನಮಗೆ ಎದುರಾಗಬಲ್ಲ ಸವಾಲಿನ ಬಗ್ಗೆ ಅರಿವಿದೆ. ತಂಡ ಪ್ರತಿ ಸವಾಲಿಗೆ ಸಿದ್ಧವಿದೆ’ ಎಂದರು. ‘ತಂಡದ ಕೋಚ್ ಆಗಿ ಸಾಕಷ್ಟು ಕಲಿತಿದ್ದೇನೆ. ಈ ಪೀಳಿಗೆಯ ಆಟಗಾರರು ಬಹಳ ಬೇಗ ವಿವಿಧ ವಾತಾವರಣಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ನಿರೀಕ್ಷೆಗೂ ಮುನ್ನ ಭಾರತ ತಂಡದಲ್ಲಿ ಅವಕಾಶ ಪಡೆದರೂ ಅಚ್ಚರಿ ಪಡಬೇಕಿಲ್ಲ’ ಎಂದರು.