- Home
- Sports
- Cricket
- ಧೋನಿಯಿಂದ ರೋಹಿತ್‌ವರೆಗೆ: ಡೈಹಾರ್ಡ್ ಫ್ಯಾನ್ಸ್ ಅನ್ನೇ ಲೈಫ್ ಪಾರ್ಟ್ನರ್ ಮಾಡಿಕೊಂಡ ಸ್ಟಾರ್ ಕ್ರಿಕೆಟರ್ಸ್
ಧೋನಿಯಿಂದ ರೋಹಿತ್‌ವರೆಗೆ: ಡೈಹಾರ್ಡ್ ಫ್ಯಾನ್ಸ್ ಅನ್ನೇ ಲೈಫ್ ಪಾರ್ಟ್ನರ್ ಮಾಡಿಕೊಂಡ ಸ್ಟಾರ್ ಕ್ರಿಕೆಟರ್ಸ್
Fans to Life Partners ರೋಹಿತ್ ಶರ್ಮಾ, ಶಿಖರ್ ಧವನ್, ಜಸ್ಪ್ರೀತ್ ಬುಮ್ರಾ, ಯುವರಾಜ್ ಸಿಂಗ್ ಸೇರಿ ಅಭಿಮಾನಿಗಳೊಂದಿಗೆ ಪ್ರೀತಿಸಿ ಮದುವೆಯಾದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರ ರೋಚಕ ಕಥೆಗಳು.

ರೋಹಿತ್ ಶರ್ಮಾ – ರಿತಿಕಾ ಸಜ್ದೇಹ್
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಜೋಡಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಂದು.
ರಿತಿಕಾ ಆರಂಭದಲ್ಲಿ ರೋಹಿತ್ ಅವರ ಅಭಿಮಾನಿಯಾಗಿದ್ದರು. ಬಳಿಕ ಕ್ರೀಡಾ ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿತು. ಆ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು, ಹಲವು ವರ್ಷಗಳ ಡೇಟಿಂಗ್ ನಂತರ 2015ರಲ್ಲಿ ವಿವಾಹವಾದರು. ಇವರಿಗೆ ಈಗ ಮಗಳು ಮತ್ತು ಮಗ ಇದ್ದಾರೆ.
ಶಿಖರ್ ಧವನ್ – ಆಯೇಷಾ ಮುಖರ್ಜಿ
ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರ ಪ್ರೇಮಕಥೆಯೂ ವಿಭಿನ್ನವಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಆಯೇಷಾ ಮುಖರ್ಜಿ, ಧವನ್ ಅವರ ಕ್ರಿಕೆಟ್ ಅಭಿಮಾನಿಯಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾದ ಈ ಜೋಡಿ ನಂತರ ವೈಯಕ್ತಿಕ ಕಾರಣಗಳಿಂದ ಬೇರ್ಪಟ್ಟರು.
ಜಸ್ಪ್ರೀತ್ ಬುಮ್ರಾ – ಸಂಜನಾ ಗಣೇಶನ್
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಕ್ರಿಕೆಟ್ ನಿರೂಪಕಿ ಹಾಗೂ ಅಭಿಮಾನಿಯಾಗಿದ್ದರು.
ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ಕವರೇಜ್ ವೇಳೆ ಇಬ್ಬರ ಪರಿಚಯ ಬೆಳೆದಿದ್ದು, ನಂತರ ಅದು ಪ್ರೀತಿಗೆ ತಿರುಗಿತು. 2021ರಲ್ಲಿ ಇವರ ವಿವಾಹ ನಡೆಯಿತು. ಒಬ್ಬ ಮಗ ಇದ್ದಾನೆ ಇವರಿಗೆ
ಯುವರಾಜ್ ಸಿಂಗ್ – ಹೇಜಲ್ ಕೀಚ್
ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಪತ್ನಿ ಹೇಜಲ್ ಕೀಚ್ ಕೂಡ ಯುವಿಯ ಅಭಿಮಾನಿಯಾಗಿದ್ದರು.
ಆರಂಭದಲ್ಲಿ ಹೇಜಲ್ ಹಲವು ಬಾರಿ ಯುವರಾಜ್ ಅವರ ಭೇಟಿಯ ಆಹ್ವಾನವನ್ನು ನಿರಾಕರಿಸಿದ್ದರೂ, ನಂತರ ಸ್ನೇಹ ಗಟ್ಟಿಯಾಗಿ ಬೆಳೆದಿತು. ಹಲವು ವರ್ಷಗಳ ಬಳಿಕ 2016ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಗೆ ಮಗ ಮತ್ತು ಮಗಳು ಇದ್ದಾರೆ.
ಜಹೀರ್ ಖಾನ್ – ಸಾಗರಿಕಾ ಘಾಟ್ಗೆ
ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹಾಗೂ ನಟಿ ಸಾಗರಿಕಾ ಘಾಟ್ಗೆ ಅವರ ಜೋಡಿಯೂ ಅಭಿಮಾನಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಕ್ರಿಕೆಟ್ ಮೇಲಿನ ಆಸಕ್ತಿ ಮತ್ತು ಪರಸ್ಪರ ಪರಿಚಯದಿಂದ ಆರಂಭವಾದ ಸಂಬಂಧ ನಂತರ ಪ್ರೀತಿಯಾಗಿ ಬದಲಾಗಿದ್ದು, 2017ರಲ್ಲಿ ವಿವಾಹವಾಗಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.