ಫಿಟ್ನೆಸ್ ಬಗ್ಗೆ ಅತಿಹೆಚ್ಚು ಗಮನ ಹರಿಸುವ ಕೊಹ್ಲಿ, ಚಿಪ್ಸ್ ತಿನ್ನುತ್ತಾರೆ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಟೀಕಿಸಿದ್ದರು. ಇದಕ್ಕೆ ಟ್ವೀಟರ್‌ನಲ್ಲಿ ಪತ್ರವೊಂದನ್ನು ಹಾಕಿರುವ ಕೊಹ್ಲಿ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ನವದೆಹಲಿ[ಮೇ.21]: ಭಾರತ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕ್ಷುಲ್ಲಕ ಕಾರಣವೊಂದರಿಂದ ವಿವಾದಕ್ಕೆ ಸಿಲುಕಿದ್ದಾರೆ.
ಕೊಹ್ಲಿ ಅಭ್ಯಾಸ ಹಾಗೂ ಪಂದ್ಯದ ನಡುವೆ ಚಿಪ್ಸ್ ತಿನ್ನುತ್ತಿರುವ ಕೆಲ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿವೆ. ಜತೆಗೆ ಚಿಪ್ಸ್ ಜಾಹೀರಾತೊಂದರಲ್ಲೂ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್ನೆಸ್ ಬಗ್ಗೆ ಅತಿಹೆಚ್ಚು ಗಮನ ಹರಿಸುವ ಕೊಹ್ಲಿ, ಚಿಪ್ಸ್ ತಿನ್ನುತ್ತಾರೆ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಟೀಕಿಸಿದ್ದರು. ಇದಕ್ಕೆ ಟ್ವೀಟರ್‌ನಲ್ಲಿ ಪತ್ರವೊಂದನ್ನು ಹಾಕಿರುವ ಕೊಹ್ಲಿ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
‘ಫಿಟ್ನೆಸ್‌ನತ್ತ ನನ್ನ ಗಮನ ಸ್ವಲ್ಪವೂ ಕಡಿಮೆಯಾಗಿಲ್ಲ. ಚಿಪ್ಸ್ ನನಗೆ ಇಷ್ಟ ತಿನ್ನುತ್ತೇನೆ. ಅಭಿಮಾನಿಗಳಿಗೆ ಬೇಸರವಾಗಿದ್ದರೆ ಕ್ಷಮೆ ಇರಲಿ’ ಎಂದು ಬರೆದಿದ್ದಾರೆ.
