Asianet Suvarna News Asianet Suvarna News

ರೋಚಕ ಪಂದ್ಯದಲ್ಲಿ ಸೋಲು ತಪ್ಪಿಸಿಕೊಂಡ ಶ್ರೀಲಂಕಾ

ಮೊದಲ ಇನ್ನಿಂಗ್ಸ್'ನಲ್ಲಿ  ಭಾರತಕ್ಕೆ ಆದ ಗತಿಯೇ ಕೊನೆಯ ದಿನ ಶ್ರೀಲಂಕಾಕ್ಕೂ ಆಯಿತು. 231 ಟಾರ್ಗೆಟ್'ನೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಲಂಕ ಪಡೆ ಮೊದಲ ಓವರ್'ನಲ್ಲಿಯೇ ಭುವಿ ಬೌಲಿಂಗ್'ನಲ್ಲಿ ಸಮರವಿಕ್ರಮ(0) ಅವರ ವಿಕೇಟ್ ಕಳೆದುಕೊಂಡಿತು.

Virat Kohli Bhuvneshwar Kumar shine as Sri Lanka escape defeat in Kolkata Test

ಕೋಲ್ಕೊತ್ತಾ(ನ.20): ಕೊನೆಯ ದಿನ ಒಂದಿಷ್ಟು ಪವಾಡ ಅಥವಾ ಒಂದಷ್ಟು ಓವರ್'ಗಳು ಹೆಚ್ಚಿದ್ದರೆ ಪಂದ್ಯವು ಭಾರತದ ಕಡೆ ವಾಲುತ್ತಿತ್ತು. 75 ರನ್'ಗೆ 7 ವಿಕೇಟ್ ಕಳೆದುಕೊಂಡ ಲಂಕಾ ಪಡೆ ಸೋಲನ್ನು ತಪ್ಪಿಸಿಕೊಂಡಿತು.

ಕೊನೆಯ ದಿನದಲ್ಲಿ  171/1 ರನ್'ನೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ ಶತಕದೊಂದಿಗೆ 8 ವಿಕೇಟ್ ನಷ್ಟಕ್ಕೆ 352 ರನ್'ಗಳಿಸಿ 231 ರನ್' ಗುರಿ ನೀಡಿತು. 104 ರನ್ ಬಾರಿಸಿದ ಕೊಹ್ಲಿ ಖಾತೆಯಲ್ಲಿ   12 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸ್'ರ್'ಗಳಿದ್ದವು.

ಪೂಜಾರಾ 22 ರನ್ ಔಟಾದರೆ , ಆಟ ಆರಂಭಿಸಿದ್ದ ಕನ್ನಡಿಗ ರಾಹುಲ್ 79 ರನ್'ಗೆ ಪೆವಿಲಿಯನ್'ಗೆ ತೆರಳಿಸಿದರು. ಕೊನೆಯ ಆಟಗಾರ ಶಮಿ 12 ರನ್ನ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಒಂದಂಕ್ಕಿಯ ಮೊತ್ತವನ್ನು ಗಳಿಸಲಿಲ್ಲ. ಶ್ರೀಲಂಕಾ ಪರ ಮೊದಲ ಇನ್ನಿಂಗ್ಸ್'ನಲ್ಲಿ 4 ವಿಕೇಟ್ ಪಡೆದಿದ್ದ  ಲಕ್ಮಲ್ 2ನೇ ಇನ್ನಿಂಗ್ಸ್'ನಲ್ಲೂ 93/3 ವಿಕೇಟ್ ಪಡೆದರು. ಇನ್ನುಳಿದಂತೆ 76/3 ಹಾಗೂ ಗಮಗೆ ಮತ್ತು ಪೆರೇರಾ 49/1 ವಿಕೇಟ್ ಕಿತ್ತು ಭಾರತದ ಸರ್ವ ಪತನಕ್ಕೆ ಕಾರಣರಾದರು.

ಭುವಿ, ಶಮಿ ದಾಳಿಗೆ ತಬ್ಬಿಬ್ಬಾದ ಸಿಂಹಳಿಯರು

ಮೊದಲ ಇನ್ನಿಂಗ್ಸ್'ನಲ್ಲಿ  ಭಾರತಕ್ಕೆ ಆದ ಗತಿಯೇ ಕೊನೆಯ ದಿನ ಶ್ರೀಲಂಕಾಕ್ಕೂ ಆಯಿತು. 231 ಟಾರ್ಗೆಟ್'ನೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಲಂಕ ಪಡೆ ಮೊದಲ ಓವರ್'ನಲ್ಲಿಯೇ ಭುವಿ ಬೌಲಿಂಗ್'ನಲ್ಲಿ ಸಮರವಿಕ್ರಮ(0) ಅವರ ವಿಕೇಟ್ ಕಳೆದುಕೊಂಡಿತು. ಮೂರನೇ ಓವರ್'ನಲ್ಲಿ  ತಂಡದ ಮೊತ್ತ 2 ರನ್'ಗಳಿದ್ದಾಗ   ಕರುಣಾರತ್ನೆ ಶಮಿ ಬೌಲಿಂಗ್'ನಲ್ಲಿ ಬೌಲ್ಡ್ ಆದರು. 8 ನೇ ಓವರ್'ನಲ್ಲಿ  ಭುವಿಗೆ ತಿರಿಮನೆ, 12 ಓವರ್'ನಲ್ಲಿ ಮ್ಯಾಥ್ಯೋಸ್ ಈಗೆ ಸಾಲುಸಾಲಾಗಿ ಶ್ರೀಲಂಕಾದ ವಿಕೇಟ್'ಗಳು ಬೀಳತೊಡಗಿದವು.

ನಾಯಕ ದಿನೇಶ್ ಚಂಡಿಮಾಲ್ ಕೀಪರ್ ಎನ್ ಡಿಕ್ವೆಲಾ ಒಂದಷ್ಟು ಹೊತ್ತು ಇರದಿದ್ದರೆ ಭಾರತಕ್ಕೆ ಜಯ ಸುಲಭವಾಗಿ ದೊರಕುತ್ತಿತ್ತು. ಇವರಿಬ್ಬರು ಔಟಾದ ನಂತರ ಪೆರೇರಾ ಕೂಡ ಶೂನ್ಯಕ್ಕೆ ನಿರ್ಗಮಿಸಿದರು. 26.3 ಓವರ್'ಗಳಲ್ಲಿ ತಂಡದ ಮೊತ್ತ 75/7 ಆಗಿದ್ದಾಗ ದಿನದಾಟ ಅಂತ್ಯಗೊಳಿಸಲಾಗಿ ಪಂದ್ಯವು ಡ್ರಾನಲ್ಲಿ ಮುಕ್ತಾಯವಾಯಿತು.

ಭಾರತದ ಪರ  ಭುವಿ 8/4, ಶಮಿ 34/2 ಹಾಗೂ ಯಾದವ್ 25/1 ವಿಕೇಟ್ ಕಿತ್ತು  ಗೆಲುವಿನಂಚಿಗೆ ತರಲು ಪ್ರಮುಖ ಪಾತ್ರ ವಹಿಸಿದರು. 2 ಇನ್ನಿಂಗ್ಸ್'ಗಳಲ್ಲಿ ಒಟ್ಟು 8 ವಿಕೇಟ್ ಪಡೆದ ಭುವಿ ಪಂದ್ಯ ಶ್ರೇಷ್ಠಕ್ಕೆ ಪಾತ್ರರಾದರು.

 

ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್ 172/10 ಹಾಗೂ 2ನೇ ಇನ್ನಿಂಗ್ಸ್ 352/8

ಶ್ರೀಲಂಕಾ 294/10 ಹಾಗೂ 75/7

ಫಲಿತಾಂಶ: ಡ್ರಾ

ಪಂದ್ಯ ಪುರುಶೋತ್ತಮ: ಭುವನೇಶ್ವರ್ ಕುಮಾರ್

Follow Us:
Download App:
  • android
  • ios