ವಿರಾಟ್ ಕೇವಲ ಅತಿ ಆಪ್ತರಗಷ್ಟೇ ವಿವಾಹಕ್ಕೆ ಆಹ್ವಾನ ನೀಡಿದ್ದು, ಕುಟುಂಬಸ್ಥರು ಹಾಗೂ ಬಾಲ್ಯದ ಗೆಳೆಯರು ಹಾಜರಿರಲಿದ್ದಾರೆ ಎನ್ನಲಾಗಿದ್ದು, ಕ್ರಿಕೆಟಿಗರಲ್ಲಿ ಟೀಂ ಇಂಡಿಯಾ ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಯುವರಾಜ್ ಸಿಂಗ್ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

ನವದೆಹಲಿ(ಡಿ.11): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಮದುವೆ ವದಂತಿಗೆ ದಿನಕ್ಕೊಂದು ರೆಕ್ಕೆ ಪುಕ್ಕ ಸೇರುತ್ತಿದ್ದು, ಇದೀಗ ವಿವಾಹಕ್ಕೆ ಕೇವಲ ಸಚಿನ್ ತೆಂಡುಲ್ಕರ್ ಹಾಗೂ ಯುವರಾಜ್ ಸಿಂಗ್'ಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂಬ ಗುಸುಗುಸು ಶುರುವಾಗಿದೆ.

Add Asianetnews Kannada as a Preferred SourcegooglePreferred

ವಿರಾಟ್ ಕೇವಲ ಅತಿ ಆಪ್ತರಗಷ್ಟೇ ವಿವಾಹಕ್ಕೆ ಆಹ್ವಾನ ನೀಡಿದ್ದು, ಕುಟುಂಬಸ್ಥರು ಹಾಗೂ ಬಾಲ್ಯದ ಗೆಳೆಯರು ಹಾಜರಿರಲಿದ್ದಾರೆ ಎನ್ನಲಾಗಿದ್ದು, ಕ್ರಿಕೆಟಿಗರಲ್ಲಿ ಟೀಂ ಇಂಡಿಯಾ ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಯುವರಾಜ್ ಸಿಂಗ್ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

ಡಿ.12ರಂದು ಇಟಲಿಯಲ್ಲಿ ವಿರಾಟ್-ಅನುಷ್ಕಾ ಮದುವೆ ನೆರವೇರಲಿದ್ದು, ಇಬ್ಬರ ಕುಟುಂಬದ ಸಂಬಂಧಿಕರು, ಆಪ್ತರು ಈಗಾಗಲೇ ಅಲ್ಲಿಗೆ ತಲುಪಿದ್ದಾರೆ ಎನ್ನಲಾಗಿದೆ. ಇನ್ನು ಡಿ.21/22 ರಂದು ಮುಂಬೈನಲ್ಲಿ ಅದ್ಧೂರಿ ಅರತಕ್ಷತೆಯಿರಲಿದ್ದು ತಾರಾ ಜೋಡಿಯನ್ನು ಹರಸಲು ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಬಾಲಿವುಡ್ ಸೆಲಿಬ್ರಿಟಿಗಳು ಹಾಜರಿರಲಿದ್ದಾರೆ.