ಲಂಡನ್, (ಸೆ.13): ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳಲ್ಲಿ 4-1ರಲ್ಲಿ ಅಂತರದಿಂದ ಸರಣಿಯ ಕಳೆದುಕೊಂಡ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಗರಂ ಆಗಿರುವ ಪ್ರಸಂಗ ನಡೆದಿದೆ.

ಕೊನೆಯ 5ನೇ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಪತ್ರಕರ್ತರೊಬ್ಬರು ಪ್ರಶ್ನೆಗಳು ಸುರಿಮಳೆಗೈದಿದ್ದಾರೆ. ಇದು ಅತ್ಯಂತ ಶ್ರೇಷ್ಠ ತಂಡವೆಂದು ನಂಬಿದ್ದೀರಾ? ಕಳೆದ 15 ವರ್ಷಗಳಲ್ಲಿ ಇದೆ ಉತ್ತಮ ತಂಡ ಎನ್ನಲಾಗಿದೆ ನಿಮ್ಮ ಅಭಿಪ್ರಾಯವೇನು? ಎಂದು ಕೊಹ್ಲಿಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ.

ಇದಕ್ಕೆ ತಕ್ಷಣವೇ ಉತ್ತರಿಸಿದ ಕೊಹ್ಲಿ, ನಾವು ಅತ್ಯುತ್ತಮರು ಎಂದು ನಂಬಿದ್ದೇವೆ, ನಿಮ್ಮ ದೃಷ್ಟಿಯಲ್ಲಿ ಯಾವುದು ಉತ್ತಮ ತಂಡ ಎಂದು ಕೊಹ್ಲಿ ಪತ್ರಕರ್ತನಿಗೆ ಮರು ಪ್ರಶ್ನಿಸಿದರು. ಇದಕ್ಕೆ ಪತ್ರಕರ್ತ ನನಗೆ ನಿಜವಾಗಿಯೂ ಗೊತ್ತಿಲ್ಲ ಎಂಬ ಉತ್ತರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, ನಿಮಗೆ ನಿಜವಾಗಿ ಗೊತ್ತಿಲ್ವಾ? ಅದು ನಿಮ್ಮ ಅಭಿಪ್ರಾಯ. ಧನ್ಯವಾದಗಳು ಎಂದು ಗರಂ ಆಗಿಯೇ ಉತ್ತರಿಸಿದರು.