Asianet Suvarna News Asianet Suvarna News

ದ್ರಾವಿಡ್-ಗಂಗೂಲಿ ದಾಖಲೆ ಮುರಿದ ಕೊಹ್ಲಿ-ರೋಹಿತ್!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಪರೂಪದ ದಾಖಲೆ ಬರೆದಿದ್ದಾರೆ. ಕ್ರೀಸ್‌ನಲ್ಲಿ ಅಬ್ಬರಿಸಿರುವ ಈ ಜೋಡಿ ಇದೀಗ ಬಬರೆದಿರೋ ಅಪರೂಪದ ದಾಖಲೆ ಯಾವುದು? ಇಲ್ಲಿದೆ.

Virat Kohli and Rohit Sharma quickest pair to complete 4000 runs
Author
Bengaluru, First Published Nov 2, 2018, 4:15 PM IST

ತಿರುವನಂತಪುರಂ(ನ.02): ಭಾರತ ಹಾಗೂ ವೆಸ್ಟ್ ಇಂಡೀಸ್ ಏಕದಿನ ಸರಣಿ ಗೆಲುವಿನ ಜೊತೆಗೆ ಹಲವು ದಾಖಲೆ ಬರೆದಿದೆ. 5 ಪಂದ್ಯಗಳ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜಂಟಿಯಾಗಿ ಕೆಲ ದಾಖಲೆ ಬರೆದಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆಯಾಗಿ ಅತೀ ವೇಗದಲ್ಲಿ 4000 ರನ್ ಸಿಡಿಸಿದ್ದಾರೆ. ಈ ಮೂಲಕ  ಮೂಲಕ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ದಾಖಲೆ ಮುರಿದಿದ್ದಾರೆ. 

ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ 80 ಜೊತೆಯಾಟಗಳಲ್ಲಿ 4000 ರನ್ ಪೂರೈಸಿದ್ದರು. ಇದೀಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 66 ಪಾರ್ಟ್ನರ್‌ಶಿಪ್‌ಗಳಲ್ಲಿ 4000 ರನ್ ಪೂರೈಸಿದ್ದಾರೆ.

4000 ರನ್ ಪೂರೈಸಿದ ವಿಶ್ವದ 13ನೇ ಜೋಡಿ ಹಾಗೂ ಭಾರತದ ಪರ 6ನೇ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇವರಿಬ್ಬರು 15 ಶತಕದ ಜೊತೆಯಾಟ ನೀಡಿದ್ದಾರೆ.  

Follow Us:
Download App:
  • android
  • ios