ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರಿಲಾಕ್ಸ್ ಮೂಡ್‌ಗೆ ಜಾರಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಗೋವಾಗೆ ಹಾರಿದ್ದರೆ, ರೋಹಿತ್ ಹಾಗೂ ಪತ್ನಿ ರಿತಿಕಾ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 

ಗೋವಾ(ಮೇ.17): ಐಪಿಎಲ್ ಟೂರ್ನಿ ಮುಗಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ವಿಶ್ವಕಪ್ ಟೂರ್ನಿಗೆ ಸಜ್ಜಾಗಬೇಕಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಗೆ ತಯಾರಿ ಆರಂಭಿಸೋ ಮೂದಲು ಕ್ರಿಕೆಟಿಗರು ಸಿಕ್ಕಿರೋ ಅಲ್ಪ ಸಮಯದಲ್ಲಿ ಮಸ್ತಿ ಮೂಡ್‌ಗೆ ಜಾರಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಗೋವಾಗೆ ತೆರಳಿದ್ದರೆ, ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಸಜ್ದೆ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.

View post on Instagram

ಇದನ್ನೂ ಓದಿ: ವಿಶ್ವಕಪ್ 2019: ಪಾಕ್ ತಂಡಕ್ಕೆ ಮಾರಕ ವೇಗಿ ಆಯ್ಕೆ- ಶುರುವಾಯ್ತು ನಡುಕ!

ಐಪಿಎಲ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ RCB ಲೀಗ್ ಹಂತದಿಂದಲೇ ಹೊರಬಿತ್ತು. ಟೂರ್ನಿ ವೇಳೆ ಪತ್ನಿ ಅನುಷ್ಕಾ ಶರ್ಮಾ ಕೂಡ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಸಿಕ್ಕಿರೋ ಸಮಯದಲ್ಲಿ ಇವರಿಬ್ಬರು ಗೋವಾದಲ್ಲಿ ವಿಶ್ರಾಂತಿಗೆ ಜಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಗೋವಾ ಫೋಟೋ ವೈರಲ್ ಆಗಿದೆ. 

Scroll to load tweet…

ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಪ್ರಶಸ್ತಿ ಮೊತ್ತ ಬಹಿರಂಗ- ಗೆದ್ದ ತಂಡಕ್ಕೆ ಕೋಟಿ ಕೋಟಿ!

ಮುಂಬೈ ತಂಡಕ್ಕೆ 4ನೇ ಚಾಂಪಿಯನ್ ಪಟ್ಟ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಮಾಲ್ಡೀವ್ಸ್ ಸಮುದ್ರ ತೀರದ ಫೋಟೋ ಭಾರಿ ಸದ್ದು ಮಾಡುತ್ತಿದೆ. ಪತ್ನಿ ರಿತಿಕಾ ಸಜ್ದೆ ಜೊತೆಗಿನ ಈ ಪೋಟೋ ಭಾರಿ ವೈರಲ್ ಆಗಿದೆ. ಮೇ 22 ರಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಮೇ. 30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯ ಆಡಲಿದೆ.

View post on Instagram

View post on Instagram