ರವೀಂದ್ರ ಜಡೇಜಾ ಹೊರತು ಪಡಿಸಿ ಮತ್ಯಾವ ಆಟಗಾರರು ಟ್ರಕ್ಕಿಂಗ್ ಮಾಡಿದ ಸ್ಥಳವನ್ನು ಬಹಿರಂಗಗೊಳಿಸಿಲ್ಲ.
ಬೆಂಗಳೂರು(ಫೆ.27): ಆಸ್ಟ್ರೇಲಿಯಾ ವಿರುದ್ಧ 333 ರನ್'ಗಳ ದಯಾನೀಯ ಸೋಲಿನ ನಿರಾಸೆಯಿಂದ ಹೊರಬರಲು ಕೊಹ್ಲಿ ಬಾಯ್ಸ್ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಮಾರ್ಚ್ 4 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್'ಗೂ ಮುನ್ನ ಅಲ್ಪ ಬಿಡುವಿನಲ್ಲೇ ಟ್ರಕ್ಕಿಂಗ್ ಮಾಡುವ ಮೂಲಕ ಗಮನ ಸೆಳೆದಿದೆ. ನಾಯಕ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಅಭಿನವ್ ಮುಕುಂದ್, ಅಜಿಂಕ್ಯಾ ರಹಾನೆ ತನ್ನ ಪತ್ನಿಯೊಂದಿಗೆ ಮತ್ತು ರವೀಂದ್ರ ಜಡೇಜಾ ಟ್ರಕ್ಕಿಂಗ್ ಮಾಡಿರುವ ಚಿತ್ರಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.
ರವೀಂದ್ರ ಜಡೇಜಾ ಹೊರತು ಪಡಿಸಿ ಮತ್ಯಾವ ಆಟಗಾರರು ಟ್ರಕ್ಕಿಂಗ್ ಮಾಡಿದ ಸ್ಥಳವನ್ನು ಬಹಿರಂಗಗೊಳಿಸಿಲ್ಲ. ಜಡ್ಡು ಮಾತ್ರ ಪುಣೆಯಿಂದ 80 ಕಿಮೀ ದೂರದಲ್ಲಿರುವ ತಂಹಿಣಿ ಘಾಟ್'ನಲ್ಲಿ ಟ್ರಕ್ಕಿಂಗ್ ಹೋಗಿರುವುದಾಗಿ ತಿಳಿಸಿದ್ದಾರೆ.
